ಪ್ರೇಕ್ಷಣೀಯ ಸ್ಥಳಗಳು

ಮೈಸೂರು ಮಹಾರಾಜರ ಅರಮನೆ

ಮೈಸೂರಿನ ಹೃದಯಭಾಗದಲ್ಲಿರುವ ಮೈಸೂರು ಮಹಾರಾಜರ ಅರಮನೆಯು ಭಾರತ ದೇಶದ ಅತೀ ಹೆಚ್ಚಿನ ಪ್ರೇಕ್ಷಣೀಯ ಸ್ಥಳವಾಗಿರುತ್ತದೆ. ಮತ್ತು ಇದು ನಮ್ಮ ದೇಶದಲ್ಲಿಯೇ ಬಹಳ ದೊಡ್ಡ ಅರಮನೆಯಾಗಿರುತ್ತದೆ. ಮೈಸೂರು ಒಡೆಯರ್ ಮಹಾರಾಜರು ಈ ಅರಮನೆಯನ್ನು ವಾಸಸ್ಥಳವಾಗಿ ಉಪಯೋಗಿಸುತ್ತಿದ್ದರು, ಇದರ ಹೆಸರು ಅಂಬಾ ವಿಲಾಸ ಅರಮನೆ ಎಂಬುದಾಗಿತ್ತು.

ಅರಮನೆಯು ಮರದ ಕಸೂತಿಯಿಂದ ನಿರ್ಮಿತವಾಗಿದ್ದು, 1897 ರಲ್ಲಿ ಇದ್ದ ಅರಮನೆಯು ಆಕಸ್ಮಿಕವಾಗಿ ಸುಟ್ಟು ಹೋದ ಕಾರಣ ಚಾಮರಾಜ ಒಡೆಯರ್ ಇವರ ಹಿರಿಯ ಪುತ್ರಿಯವರಾದ ಜಯಲಕ್ಷಮ್ಮಣ್ಣಿ ಇವರ ವಿವಾಹಸಂದರ್ಭದಲ್ಲಿ 1912 ರಲ್ಲಿ ಸುಮಾರು 42 ಲಕ್ಷ ವೆಚ್ಚದಲ್ಲಿ ಮರು ನಿರ್ಮಾಣಮಾಡಲಾಗಿರುತ್ತದೆ. ಪ್ರಸ್ತುತ ಅರಮನೆಯನ್ನು ಇಂಡೋ-ಸರಾಸೆನಿಕ್ ಶೈಲಿಯಲ್ಲಿ ಹಿಂದೂ, ಮುಸಲ್ಮಾನ, ರಾಜಪುತ ಮತ್ತು ಗೋಥಿಕ್ ಶೈಲಿಯ ವಾಸ್ತು ಶಿಲ್ಪಿಯನ್ನು ಅಳವಡಿಸಿ ನಿರ್ಮಿಸಲಾಗಿದೆ. ಇದು ಮೂರು ಮಹಡಿಯ ಕಲ್ಲಿನ ವಾಸ್ತುಶೈಲಿ ಮತ್ತು ಮಾರ್ಬಲ್ ಡೋಮ್ ಒಳಗೊಂಡಿರುತ್ತದೆ.ಹಾಗೂ 145 ಅಡಿಯ ಐದು ಮಹಡಿ ಶಿಖರವನ್ನೊಳಗೊಂಡಿರುತ್ತದೆ. ಮದ್ಯೆದ ಆರ್ಚ್ ಮೇಲ್ಬಾಗದಲ್ಲಿ ಬಹಳ ಆಕರ್ಶಣೆಯನ್ನು ಒಳಗೊಂಡಿರುವ ಐಶ್ವರ್ಯ, ಸಂಪತ್ತು ಮತ್ತು ಆಶಿರ್ವಾದಗಳನ್ನು ನೀಡುವ ದೇವತೆಯಾದ ಗಜಲಕ್ಷ್ಮಿ ದೇವಿಯ ವಿಗ್ರಹಗವನ್ನು ಆನೆಯೊಂದಿಗೆ ನಿರ್ಮಿಸಲಾಗಿದೆ.

ಈ ಅರಮನೆಯು 12 ಹಿಂದೂ ದೇವಸ್ಥಾನಗಳನ್ನೂಳಗೊಂಡ ಕಟ್ಟಡವಾಗಿರುತ್ತದೆ. ಬಹಳ ಹಳೆಯದಾದ 14ನೇ ಶತಮಾನದ ಕಟ್ಟಡಗಳು, ಆದರೆ ಅತಿ ನವೀನ ರೀತಿಯ ಕಟ್ಟಡವನ್ನು 1953 ರಲ್ಲಿ ನಿರ್ಮಿಸಲಾಗಿದೆ. ಇವುಗಳಲ್ಲಿ ಸೋಮೇಶ್ವರ ದೇವಸ್ಥಾನವನ್ನು ಈಶ್ವರ ದೇವರಿಗೆ ಸಮರ್ಪಿಸಲಾಗಿದೆ. ಮತ್ತು ಲಕ್ಷ್ಮಿರಮಣ ದೇವಸ್ಥಾನವನ್ನು ವಿಷ್ಣುದೇವರಿಗೆ ಸಮರ್ಪಿಸಲಾಗಿವೆ. ಇವು ಬಹಳ ಪ್ರಸಿದ್ದಿವಾದವುಗಳು

ಮೈಸೂರು ಮಹಾರಾಜರ ಈ ಅರಮನೆಯು ಗೌರವಾನ್ವಿತ ಒಡೆಯರ್ ಅವರ ರಾಜದಾನಿಯನ್ನು ಸಂಪತ್ತಿಗೆ ಅಳತೆಮಾಡಲು ಅಸಾದ್ಯವಾಗಿರುತ್ತದೆ.

ಮೈಸೂರು ಅರಮನೆಯ ಮಂಡಳಿಯು ಅಳವಡಿಸಿರುವ ದೀಪಾಲಂಕಾರ ಸೇವೆಯು ವೀಕ್ಷಣೆಗೆ 3೦ ನಿಮಿಶಗಳ ವೆಚ್ಚದಲ್ಲಿ ರೂ.50,000/- ನಿಗದಿಪಡಿಸಲಾಗಿದೆ.

ಪ್ರವೇಶ ವೇಳೆ * ಪ್ರವೇಶ ದರಗಳು * ಮೈಸೂರು ಅರಮನೆಯ ದೀಪಾಲಂಕಾರ ವೇಳೆಗಳು * ಮೈಸೂರಿನಿಂದ ಅಂತರ

10.00 ರಿಂದ
    -
05.30 ರ ವರೆಗೆ

ಭಾರತೀಯರಿಗೆ ರೂ .20/-
ವಿದೇಶೀಯರಿಗೆ ರೂ.200/-
ಹತ್ತು (10) ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರವೇಶ.
ಪಪ್ರವೇಶ ಚೀಟಿಗಳನ್ನು ಪ್ರಥಮ ದ್ವಾರದಲ್ಲಿ ಖರೀದಿಸಬೇಕಿದೆ.

ಸಂಜೆ 07.00 ರಿಂದ 08.00 ರ ವರೆಗೆ

ಇದು ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಂದು ಈವೇಳೆಯನ್ನು ಸಂಜೆ 07.00 ರಿಂದ 09.00 ರ ವರೆಗೆ ವಿಸ್ತರಿಸಲಾಗಿದೆ.

ಮೈಸೂರು ಅರಮನೆಯು ಮೈಸೂರು ನಗರದ ಹೃದಯ ಭಾಗದಲ್ಲಿದೆ.

ಯಿಂದ
ನಗರ ವಾಹನ ನಿಲ್ದಾಣ ರೈಲ್ವೇ ನಿಲ್ದಾಣ ವಿಮಾನ ನಿಲ್ದಾಣ

119,116,110,
201,178

ಗ್ರಾಮಾಂತರ ಬಸ್ ನಿಲ್ದಾಣದಿಂದ >ನಗರ ಬಸ್ ನಿಲ್ದಾಣ ->
119,116,110,
201,178

401->ಗ್ರಾಮಾಂತರ ಬಸ್ ನಿಲ್ದಾಣದಿಂದ->178,313->ನಗರ ಬಸ್ ನಿಲ್ದಾಣ->

119,116,110,201,178

ಜಗನ್ ಮೋಹನ ಅರಮನೆ

ರಾಜವಂಶಸ್ಥರಿಗೆ ಬದಲಿ ವಾಸಸ್ಥಳವಾಗಿ ಈ ಜಗನ್ ಮೋಹನ ಅರಮನೆಯನ್ನು 1861 ರಲ್ಲಿ ಕೃಷ್ಣರಾಜ ಒಡೆಯಾರ್- III ರವರ ಆಳ್ವೆಕೆ ಕಾಲದಲ್ಲಿ ಕಟ್ಟಲಾಗಿರುತ್ತದೆ. ಮೈಸೊರು ಅರಮನೆಯು ಮೂಲತಹ ರಾಜವಂಶಸ್ಥರಿಗೆ ಕಟ್ಟಲಾಗಿದ್ದು ಇದು ಬೆಂಕಿ ಅನಾಹುತದಿಂದ ಸುಟ್ಟುಹೋದ ಮೇಲೆ 1897 ರಲ್ಲಿ ಹೊಸದಾಗಿ ಕಟ್ಟಲಾಗಿರುತ್ತದೆ. ಈ ರಾಜ ಮನೆತನದವರು ಅಂಬಾ ವಿಲಾಸ ಅರಮನೆಯಲ್ಲಿ 1912 ರ ವರೆಗೂ ವಾಸಿಸುತ್ತಿದ್ದರು. ಶ್ರೀ ಕೃಷ್ಣರಾಜ ಒಡೆಯರ್ -IV ಇವರ ಮೂರ್ತಿಯನ್ನು 1902 ರಿಂದ ಜಗನ್ಮೋಹನ್ ಅರಮನೆಯ ಮುಖ್ಯ ಒಳಾಂಗಣದಲ್ಲಿ ನಿರ್ಮಿಸಿಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ಪ್ರಾಥಮಿಕ ಹಂತದ ಪದವಿದಾನ ಮಹೋತ್ಸವವನ್ನು ಈ ಅರಮನೆಯಲ್ಲಿ ಹಮ್ಮಿಕ್ಕೊಳ್ಳಲಾಗಿತ್ತು. ಹಾಗೂ ಮೊಟ್ಟಮೊದಲ ಮೈಸೂರು ವಿಧಾನ ಪರಿಷತ್ತಿನ ಅಧಿವೇಶನವನ್ನು ಈ ಅರಮನೆಯಲ್ಲಿ 1907 ರಲ್ಲಿ ಜರುಗಿಸಲಾಗಿತ್ತು. ವಿಧಾನ ಪರಿಷತ್ತಿನಲ್ಲಿ ಎಲ್ಲಾ ಸದಸ್ಯರನ್ನೊಳಗೊಂಡಂತೆ ಮೈಸೂರಿನ ದಿವಾನರ ಸಮ್ಮುಖದಲ್ಲಿ ಅಧಿವೇಶನವನ್ನು ಹಮ್ಮಿಕೊಳ್ಳಲಾಗುತ್ತಿತ್ತು.

ಪ್ರವೇಶ ಸಮಯಗಳು* ಪ್ರವೇಶ ದರಗಳು* ಮೈಸೂರಿ ನಿಂದ ಅಂತರ

08.30 am
    -
05.30 pm

ವಯಸ್ಕರಿಗೆ ರೂ - 20/-
ಮಕ್ಕಳಿಗೆ (5-10ವರ್ಷ) ರೂ 10/-

ನಗರದ ಹೃದಯ ಭಾಗದಲ್ಲಿಯೇ ಇರುತ್ತದೆ.

ಯಿಂದ
ನಗರ ಬಸ್ ನಿಲ್ದಾಣ ರೈಲ್ವೇ ನಿಲ್ದಾಣ ವಿಮಾನ ನಿಲ್ದಾಣ

ಕಾಲ್ನಡಿಗೆಯದೂರ

ಬಸ್ ನಿಲ್ದಾಣ ಮತ್ತು ಅರಮನೆಗೆ ಕಾಲ್ನಡಿಗೆಯ ದೂರ

401->ಮೈಸೂರುಗ್ರಾಮೀಣ ಬಸ್ ನಿಲ್ದಾಣ->178,313->ನಗರ ಸಾರಿಗೆ ನಿಲ್ದಾಣಕ್ಕೆ->

119,116,110,201,178

ಕೆ.ಆರ್ .ಎಸ್ ಬೃಂದಾವನ (ಕೃಷ್ಣರಾಜಸಾಗರ)

ಕೃಷ್ಣ ರಾಜ ಸಾಗರವನ್ನು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದನ್ನು ನಿರ್ಮಿಸುವ ಸಮಯದಲ್ಲಿ ಮೈಸೂರು ದಿವಾನರೂ ಆಗಿದ್ದು ಸರ್ಎಂ .ವಿಶ್ವೇಶ್ವರಯ್ಯ ನವರು ಸಾಗರದ ಹಿಂಭಾಗದಲ್ಲಿ ಸಸ್ಯೋದ್ಯಾನವನ ಮತ್ತು ಸಂಗೀತ ಕಾರಂಜಿಯನ್ನು 1927 ರಲ್ಲಿಯೇ ಪ್ರಾರಂಭಿಸಿ 1932 ರಲ್ಲಿ ಪೂರ್ಣಗೊಳಿಸಿರುತ್ತಾರೆ. ಈ ಸಸ್ಯತೋಟವು 3 ಹಂತಗಳ ನೀರಿನ ಹಾಗೂ ಕಾರಂಜಿ ಗಳಿಂದ ಕೂಡಿರುತ್ತದೆ ಮತ್ತು ಫಿಕಸ್ ಮರಗಳು, ಘೋಲಿಯೇಜ್ ಪ್ಲಾಂಟ್ ಗಳೊಳಗೊಂಡಂತೆ ಪ್ಲಮೇರಿಯಾ ಮತ್ತು ಯ್ಯೂಫೋರ್ಬಿಯಾ ಹಾಗೂ ಹೂಗಳು ನೃತ್ಯ ಕಾರಂಜಿಗಳಿಂದ ಕೂಡಿರುತ್ತದೆ. ಈ ಸಂಗೀತ ಕಾರಂಜಿಯು ಬಣ್ಣ ಬಣ್ಣಗಳಿಂದ ಕೂಡಿದ್ದು ಬಹಳ ರಮಣೀಯವಾಗಿ ಪ್ರೇಕ್ಷಕರ ಆಕರ್ಷಿತವಾಗಿದೆ. ಮತ್ತು ಸಂಜೆಯ ವೇಳೆ ಈ ಬೃಂದಾವನಕ್ಕೆ ಒಳ್ಳೆಯ ದೀಪಾಲಂಕಾರಗೊಳಿಸಲಾಗಿರುತ್ತದೆ.

ಮಂಡ್ಯ ಜಿಲ್ಲೆಯ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕ್ರುಷ್ಣರಾಜ ಸಾಗರವು ಈ ಜಿಲ್ಲೆಯ ಜೀವನದಿಯಾಗಿರುತ್ತದೆ. ಅದನ್ನು 1924 ರಲ್ಲಿ ನಿರ್ಮಿಸಲಾಗಿದೆ. ವ್ಯೆವಸಾಯದ ಉದ್ದೇಶದಿಂದ ನಿರ್ಮಿತವಾಗಿರುವ ಈ ಕೆ.ಆರ್.ಸಾಗರವು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ವ್ಯವಸಾಯಕ್ಕೆ ಅಲ್ಲದೇ, ಕುಡಿಯುವ ನೀರು ಸರಬರಾಜುಗಾಗಿ ಮೈಸೂರು ನಗರ ಮತ್ತು ಬೆಂಗಳೂರು ನಗರದ ಸುಮಾರು ಭಾಗಕ್ಕೂ ನೀರನ್ನು ಒದಗಿಸಲಾಗಿದೆ. ಇದಲ್ಲದೆ ಉಳಿದ ನೀರನ್ನು ತಮಿಳು ನಾಡಿನ ವ್ಯವಸಾಯಕ್ಕೆ ಮತ್ತು ಮೆಟ್ಟೂರು ಜಲಾಶಯಕ್ಕೆ ಹರಿದು ಹೋಗಲು ಅವಕಾಶಗಳನ್ನು ಮಾಡಲಾಗಿರುತ್ತದೆ.ಈ ಜಲಾಶಯವು ಮುಖ್ಯ ಅಭಿಯಂತರರೂ ಮತ್ತು ದಿವಾನರೂ ಆಗಿದ್ದಂತಹ ಶ್ರೀ. ಸರ್. ಎಂ.ವಿಶ್ವೇಶ್ವರಯ್ಯನವರ ಕನಸಿನ ಜಲಾಶಯವಾಗಿರುತ್ತದೆ. ಈ ಜಲಾಶಯವನ್ನು ಮೈಸೂರು ರಾಜದಾನಿಯ ಒಡೆಯರಾದ ಶ್ರೀ.ಕೃಷ್ಣ ರಾಜ ಒಡೆಯರ್ ಇವರ ಸಹಾಯಾರ್ಥವಾಗಿ ನಿರ್ಮಿಸಲಾಗಿದೆ.

ಕೆ. ಆರ್. ಎಸ್. ಜಲಾಶಯವು ಕಾಮಗಾರಿ ಅಭಿಯಂತರರಿಗೆ ಒಂದು ವಿಸ್ಮಯ ಕಾರಿ ಮತ್ತು ಮಹತ್ತರವಾದ ಪ್ರೇಕ್ಷಣೀಯ ಸ್ಥಳವಾಗಿಸಿರುವುದರಿಂದ ಮೈಸೂರಿಗೆ ಆಗಮಿಸುವ ಪ್ರೀಕ್ಷಕರಿಗೆ ಒಂದು ಆಕರ್ಷಣಾ ಸ್ಥಳವಾಗಿದೆ. ಇದರಿಂದ ರಾಜ್ಯದ ಸುಮಾರು ಕೇವಲ 150 ಎಕರೆಯ ಸ್ಥಳದಲ್ಲಿ ಸುಮಾರು 1,20,000 ಎಕರೆ ರೈತಾಪಿ ವ್ಯವಾಸಾಯಕ್ಕೆ ಅನುಕೂಲವಾಗಿರುತ್ತದೆ..

ಬೃಂದಾವನ ವೀಕ್ಷಣಾ ವೇಳೆ * ಸಂಗೀತ ಕಾರಂಜಿ ವೀಕ್ಷಣಾ ಅವಧಿ * ಪ್ರವೇಶ ದರಗಳು * ಮೈಸೂರಿನಿಂದ ಕೆ.ಅರ್.ಎಸ್ ಗೆ ಅಂತರ

ಎಲ್ಲಾ ದಿನಗಳಂದು ಮುಂಜಾನೆ 06 ರಿಂದ ರಾತ್ರಿ 08 ಘಂಟೆಯ ವರೆಗೆ
ಶನಿವಾರ ಮತ್ತು ಭಾನುವಾರಗಳಂದು ಮುಂಜಾನೆ 06 ರಿಂದ ರಾತ್ರಿ 09 ಘಂಟೆಯ ವರೆಗೆ

ಎಲ್ಲಾ ದಿನಗಳಂದು ಸಂಜೆ 06.30 ರಿಂದ 07.30 ರ ವರೆಗೆ
ಶನಿವಾರ ಮತ್ತು ಭಾನುವಾರಗಳಂದು ಸಂಜೆ 06.30 ರಿಂದ 08.30 ರ ವರೆಗೆ

ವಯಸ್ಕರಿಗೆ ರೂ 15/-
ಮಕ್ಕಳಿಗೆ ರೂ 5/- (5 ರಿಂದ 12 ವರ್ಷದೊಳಗೆ)

ಮೈಸೂರಿನಿಂದ 24 ಕಿ.ಮೀ.ಅಂತರ ವಿರುತ್ತದೆ.

ಯಿಂದ
ನಗರ ಸಾರಿಗೆ ನಿಲ್ದಾಣದಿಂದ ರೈಲ್ವೇ ನಿಲ್ದಾಣದಿಂದ ವೆಮಾನ ನಿಲ್ದಾಣದಿಂದ

303,303ಎ

ದಾಸಪ್ಪ ವೃತ್ತದ ವರೆಗೆ ಕಾಲ್ನಡಿಗೆ->303,303ಎ

401->ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ->178,313,110,110ಎ,
110B->ಕೇಂ.ಬ.ನಿ->

303,303ಎ

ಕಾರಂಜಿ ಕೆರೆ

ಈ ಕಾರಂಜಿ ಕೆರೆಯು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಹಾಗೂ ಮೈಸೂರು ಮೃಗಾಲಯದ ಹಿಂಭಾಗದಲ್ಲಿ ಇದೆ. ಕನ್ನಡದಲ್ಲಿ ಕಾರಂಜಿ ಎಂದರೆ ಚಿಲುಮೆ ಎಂದು ಪ್ರಸಿದ್ದ ವಾಗಿದೆ. ಈ ಕೆರೆಯ ವಿಸ್ತೀರ್ಣವು 90 ಎಕರೆಯನ್ನು ಆವರಿಸಿದ್ದು ಇದು ಒಂದು ಅತೀ ದೊಡ್ಡ ಕೆರೆಯಾಗಿರುತ್ತದೆ. ಈ ಕೆರೆಯಲ್ಲಿ ಸುಮಾರು 90 ವಿವಿಧ ರೀತಿಯ ಪಕ್ಷಿಗಳು ಬಂದು ವಾಸಿಸುತ್ತವೆ. ಹಾಗೂ ವಿವಿದ ಬಗೆಯ ಚಿಟ್ಟೆಗಳು, ಚಿಕ್ಕ ಸಸ್ತನಿಗಳು ಒಳ್ಳೆಯ ತಂಪಾದ ಜನಾಕರ್ಷಿತ ಪ್ರದೇಶವಾಗಿರುತ್ತದೆ.

ಕಾರಂಜಿ ಕೆರೆಯನ್ನು ಸುಮಾರು 100 ವರ್ಷಗಳ ಹಿಂದೆ ಮೈಸೂರು ಮಹಾರಾಜರು ನಿರ್ಮಿಸಿರುವುದು ಕಂಡುಬರುತ್ತದೆ. ಇದರ ವ್ಯಾಪ್ತಿಯ ಸದ್ಬಳಕೆಯ ನಗರ ವಾಸಿಗಳಿಗೆ ಕುಡಿಯಲು, ಸ್ನಾನಕ್ಕಾಗಿ ಮತ್ತು ಇತರೆ ಕೆಲಸಗಳಿಗೆ ಅನುಕೂಲವಾಗುತ್ತಿರುತ್ತದೆ. ಮೈಸೂರು ಮೃಗಾಲಯವು 1976 ರಲ್ಲಿ ಈ ಕೆರೆಯನ್ನು ಅದರ ಸುಪರ್ದಿಗೆ ತೆಗೆದುಕೊಂಡಿರುತ್ತದೆ. ಈ ಕೆರೆಯು 90 ಎಕರೆಯಷ್ಟು ನೀರಿನಿಂದ ಆವರಿಸಿದ್ದು 2.5 ಕೀ.ಮೀ. ಉದ್ದದ ಹರಿಗಾಲುವೆಯಿಂದ ಒಳಗೊಂಡು ಚಾಮುಂಡಿ ಬೆಟ್ಟದ ಸುತ್ತುವರಿದ ಸುಮಾರು 745 ಹೆಕ್ಟೇರ್ ನೀರಾವರಿಗೆ ಅನುಕೂಲವಾಗಿರುತ್ತದೆ.

ಈ ಕಾರಂಜಿ ಕೆರೆಯನ್ನು ಮಕ್ಕಳ ಜಲವಿಹಾರಕ್ಕಾಗಿಯೂ ಉಪಯೋಗಿಸಲಾಗುತ್ತಿದೆ . ಕಾರಂಜಿ ಕೆರೆಯನ್ನು ವೀಕ್ಷಿಸಲು ಒಂದು ಎತ್ತರವಾದ ಟೋವರ್ ಇದ್ದು, ಇದು ಸ್ತುತ್ತುಮುತ್ತಲಿನ ಹಸಿರು ವಲಯವನ್ನು ವೀಕ್ಷಿಸಲು ಬಹಳ ಸುಂದರವಾಗಿರುತ್ತದೆ. ಮೈಸೂರು ಮೃಗಾಲಯದ ಆಡಳಿತದಲ್ಲಿ ಕಾರಂಜಿ ಕೆರೆ ಒಳಪಟ್ಟಿರುತ್ತದೆ.

ಪ್ರವೇಶದ ವೇಳೆ* ಪ್ರವೇಶದ ದರಗಳು* ದೋಣಿ ವಿಹಾರ ದರಗಳು* ಮೈಸೂರು ಅರಮನೆಯಿಂದ ಅಂತರ

08.30 am (ಬೆಳಗ್ಗೆ)
   -    
05.30 pm (ಸಂಜೆ)
ಮಂಗಳವಾರ ರಜೆ

ವಯಸ್ಕರಿಗೆ ರೂ.10/- ಮಕ್ಕಳಿಗೆ ( 5 ರಿಂದ 15 ವರ್ಷಗಳೊಳಗೆ) ರೂ.05/- ಹಿರಿಯ ನಾಗರೀಕರಿಗೆ ರೂ.05/- ಸ್ಟಿಲ್ ಕ್ಯಾಮರಾ ರೂ.10/- ವಿಡಿಯೋ ಕ್ಯಾಮರಾ ರೂ.25/-

ವಯಸ್ಕರಿಗೆ ರೂ.25/- ಮಕ್ಕಳಿಗೆ ರೂ.15/-

ಮೈಸೂರು ಅರಮನೆಯಿಂದ 3 ಕಿ.ಮೀ ಮತ್ತು ನಗರ ಸಾರಿಗೆ ಬಸ್ ನಿಲ್ದಾಣದಿಂದ 3 ಕಿ.ಮೀ. ಅಂತರದಲ್ಲಿದೆ.

ಯಿಂದ
ನಗರ ಬಸ್ ನಿಲ್ದಾಣದಿಂದ ರೈಲ್ವೇ ನಿಲ್ದಾಣದಿಂದ ವಿಮಾನ ನಿಲ್ದಾಣದಿಂದ

201

119,116,62B>ನಗರ ಸಾರಿಗೆ ನಿಲ್ದಾಣ->
200,201,202

401->ಗ್ರಾಮಾಂತರ ಸಾರಿಗೆ ನಿಲ್ದಾಣದಿಂದ->110,178,313,315->
ನಗರ ಸಾರಿಗೆ ನಿಲ್ದಾಣದಿಂದ->

200,201,202

ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ

ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನವು ಶ್ರೀರಂಗ ಪಟ್ಟಣದಲ್ಲಿ ಭಗವಾನ್ ವಿಷ್ಣುವಿನ ಅಪರಾವತಾರ ಮೂರ್ತಿಯಾಗಿ ಕಾವೇರಿ ನದಿಯ ದಡದಲ್ಲಿ ಪಂಚರಂಗ ಕ್ಷೇತ್ರವಾಗಿ ಪ್ರಸಿದ್ಧಿಯಾಗಿದೆ. ಈ ನಗರವು ಸುಲ್ತಾನ್ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಇವರಿಂದ ನಿರ್ಮಿಸಲ್ಪಟ್ಟಿದ್ದು ಹಾಗು ಈ ಇಬ್ಬರು ಮುಸ್ಲಿಂ ರಾಜರುಗಳು (ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ) ಶ್ರೀ ರಂಗನಾಥ ಸ್ವಾಮಿಯ ಭಕ್ತರಾಗಿರುತ್ತಾರೆ. ಇದರಿಂದ ಶ್ರೀರಂಗಪಟ್ಟಣವು ಬಹಳ ಪ್ರಸಿದ್ದ ನಗರವಾಗಿತ್ತು ಎಂಬುದು ಗೊತ್ತಾಗಿರುತ್ತದೆ. ಈ ದೇವಸ್ಥಾನವು ಮಕರ ಸಂಕ್ರಾಂತಿಯ ಅವಧಿಯಲ್ಲಿ ದೀಪಾಲಂಕರಾದಿಂದಾಗಿ ಹೆಚ್ಚಿನ ಪ್ರೀಕ್ಷಕರು ಮತ್ತು ಭಕ್ತರನ್ನು ಆಕರ್ಶಿಸುತ್ತದೆ.

ಈ ಶ್ರೀರಂಗನಾಥ ದೇವಸ್ಥಾನವನ್ನು ರಾಜ ಗಂಗ ತಿರುಮಲಯ್ಯ ಇವರ ಸಾಮ್ರಾಜ್ಯದ ಅವಧಿಯಲ್ಲಿ ಶ್ರೀರಂಗ ಪಟ್ಟಣದಲ್ಲಿ 894 ನೇ ಕ್ರಿ.ಶ. ರಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. ದೇವಸ್ಥಾನದ ಅಭಿವೃದ್ದಿಗೆ ಹಲವಾರು ರಾಜಮನೆತನಗಳು ಶ್ರಮಿಸಿರುತ್ತವೆ. ವಿಜಯನಗರ ರಾಜರು, ಹೊಯ್ಸಳರು , ಹೈದರ್ ಆಲಿ, ಟಿಪ್ಪು ಸುಲ್ತಾನ್ ಮತ್ತು ಮೈಸೂರಿನ ಒಡೆಯರುಗಳು ಇವರುಗಳಲ್ಲಿ ಪ್ರಸಿದ್ದರಾದ ರಾಜರಾಗಿರುತ್ತಾರೆ.

ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವನ್ನು ಬಹುಮುಖ್ಯವಾಗಿ ದಕ್ಷಿಣ ಭಾರತದ ವೈಷ್ಣವರು ನಿರ್ವಹಿಸುತ್ತಿರುತ್ತಾರೆ. ಇದರ ವಾಸ್ತು ಶಿಲ್ಪವು ಹೊಯ್ಸಳ ಮತ್ತು ವಿಜಯನಗರ ರಾಜರುಗಳ ಆಳ್ವಿಕೆಗೊಳಪಟ್ಟಿತ್ತೆಂಬುದು ತಿಳಿಯುತ್ತದೆ. ಮುಖ್ಯ ದ್ವಾರವನ್ನು 24 ರೀತಿಯ ವಿಷ್ಣುವಿನ ಅವತಾರದಲ್ಲಿ ಕೆತ್ತನೆ ಮಾಡಲಾಗಿದೆ. ಈ ದ್ವಾರವನ್ನು ಆಭರಣಗಳಿಂದ ಕೂಡಿದ ಜೋಡಿ ಆನೆಗಳ ವಿಗ್ರಹಗಳನ್ನು ನಿರ್ಮಿಸಲಾಗಿದೆ. ಭಕ್ತರು ಒಳಗೆ ಪ್ರವೇಶಿಸುತ್ತಿದ್ದಂತೆ ಚಿನ್ನದಿಂದ ಲೇಪಿತವಾದ ಗರುಡವಾಹನ ಮತ್ತು ನಾಗಶೇಷನ ಮೇಲೆ ಪವಡಿಸಿರುವುದು ಮತ್ತು ರಂಗನಾಯಕಿ ದೇವಿಯ ಮೂರ್ತಿಗಳಿವೆ. ಈ ದೇವಸ್ಥಾನದಲ್ಲಿ ಕಾವೇರಿ ನದಿಯ ಮತ್ತು ಗೌತಮ ಮಹರ್ಷಿಯ ಪ್ರತೀಕಗಳಿರುತ್ತವೆ. ಈ ದೇವಸ್ಥಾನದಲ್ಲಿ ಕಾವೇರಿ ನದಿಯ ಮತ್ತು ಗೌತಮ ಮಹರ್ಷಿಯ ಪ್ರತೀಕಗಳಿರುತ್ತವೆ. ಈ ದೇವಸ್ಥಾನವು ವಿವಿಧ ಹಿಂದೂ ಧರ್ಮಗಳ ಭಕ್ತರಿಂದ ಕೂಡಿದ ವೆಂಕಟೇಶ್ವರ, ನರಸಿಂಹ ಮತ್ತು ಪಂಚಮುಖ ಆಂಜಿನೀಯ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತದೆ.

ಶ್ರೀ ರಂಗನಾಥ ಸ್ವಾಮಿಯ ದರ್ಶನದ ವೇಳೆಯು*

ಬೆಳಗ್ಗೆ 07.30 ರಿಂದ 01.00 ಮತ್ತು ಸಂಜೆ 04.00 ರಿಂದ 08.00 ರ ಅವಧಿಯಲ್ಲಿರುತ್ತದೆ.

ಯಿಂದ
ನಗರ ಸಾರಿಗೆ ನಿಲ್ದಾಣದಿಂದ ರೈಲ್ವೇ ನಿಲ್ದಾಣದಿಂದ ವಿಮಾನ ನಿಲ್ದಾಣದಿಂದ

307,313,313ಎ

ದಾಸಪ್ಪ ವೃತ್ತದ ವರೆಗೆ ಕಾಲ್ನಡಿಗೆ->307


ಗ್ರಾ.ಸ.ನಿಲ್ದಾಣಕ್ಕೆ ಬರುವ ಬಸ್ಸುಗಳು->313,313ಎ

401->ಗ್ರಾ.ಸ.ನಿಲ್ದಾಣ->110,178,315
->ನ.ಸಾ.ನಿ->307
401->ಗ್ರಾ.ಸ.ನಿಲ್ದಾಣ->313,313ಎ

ಚಾಮುಂಡಿ ಬೆಟ್ಟ

ಮೈಸೂರು ನಗರದಿಂದ ಸುಮಾರು 8- 10 ಕಿ.ಮೀ. ಸುತ್ತಳತೆಯ ಅಂತರದಲ್ಲಿರುವವರು ಚಾಮುಂಡಿ ಬೆಟ್ಟವನ್ನು ಸುಲಭವಾಗಿ ವೀಕ್ಷಿಸಬಹುದು ಹಾಗೂ ಚಾಮುಂಡಾಂಬೆ ದೇವಿಯು ಈ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ ಸುಮಾರು 3,489 ಅಡಿಗಳ ಎತ್ತರದಲ್ಲಿದ್ದು ಮತ್ತು ಮೈಸೂರುವಿನಿಂದ 13 ಕಿ.ಮೀ ಗಳ ಅಂತರದಲ್ಲಿರುತ್ತದೆ. ಈ ದೇವಿ ದೇವಸ್ಥಾನವನ್ನು ಮಹಾರಾಜರ ಕುಟುಂಬದವರಿಗೆ ಮನೆ ದೇವರಾಗಿತ್ತು ಮತ್ತು ಮಹಿಷಾಸುರನನ್ನು ಸಂಹರಿಸಿದ ಕಾರಣದಿಂದ "ಮಹಿಷಾಸುರಮರ್ದಿನಿ" ಎಂಬ ನಾಮಾಂಕಿತದಲ್ಲಿ ಮನೆ ದೇವಿಯಂತೆ ನಿರ್ಮಿಸಲಾಗಿತ್ತು. ಚಾಮುಂಡೇಶ್ವರಿ ದೇವಿಯನ್ನು ದುರ್ಗಾ ದೇವಿ ಅವರಾವತಾರವೆಂದು, ಕಾಳೀದೇವಿ ಮತ್ತು ಚಾಮುಂಡಾಂಬೆ ಎಂಬ ಹೆಸರುಗಳಿಂದ ವರ್ಣಿಸಲಾಗುತ್ತಿದೆ.

ಚಾಮುಂಡೇಶ್ವರಿ ದೇವಸ್ಥಾನವನ್ನು ಬಹುಪಾಲು ಮಹಾರಾಜರ ಮನೆದೇವಿಯಂತೆ ನಿರ್ವಹಣೆ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿರುತ್ತದೆ. 1659 ರಲ್ಲಿ ದೊಡ್ಡ ದೇವರಾಜ ಒಡೆಯರ್ ಇವರ ಅವಧಿಯಲ್ಲಿ 1000 ಮೆಟ್ಟಿಲುಗಳನ್ನು ಮತ್ತು ಈಶ್ವರನಿಗೆ ಬಹುಪ್ರಿಯವಾದ ನಂದಿಯ ಬಹುದೊಡ್ಡ ನಂದಿ ವಿಗ್ರಹವನ್ನು ನಿರ್ಮಿಸಲಾಯಿತು. ಈ ವಿಗ್ರಹವು 16 ಅಡಿ (4.8 ಮೀಟರ್) ಮುಂಭಾಗ ಮತ್ತು 25 ಅಡಿ (7.5 ಮೀ) ಉದ್ದವಿರುತ್ತದೆ. ಈ ನಂದಿ ವಿಗ್ರಹಕ್ಕೆ ಬಹು ದೊಡ್ಡ ಮತ್ತು ಆಕರ್ಷಣೆಯಿಂದ ಕೂಡಿದ ಘಂಟೆಗಳನ್ನು ಇದರ ಕುತ್ತಿಗೆ ಭಾಗದಲ್ಲಿ ನಿರ್ಮಿಸಲಗಿದೆ. ನಂದಿ ಮತ್ತು ದೇವಸ್ಥಾನವು ಪಕ್ಕದಲ್ಲಿಯೇ ಇದ್ದು ಚಾಮುಂಡಿ ಬೆಟ್ಟಕ್ಕೆ ಹತ್ತುವ 700 ನೇ ಮೆಟ್ಟಿಲಿನ ಬಳಿಯೇ ನಿರ್ಮಿಸಲಾಗಿದೆ. ಕೃಷ್ಣದೇವರಾಜ ಒಡೆಯರ್ - III ಈ ದೇವಸ್ಥಾನದ 3 ಮಹಡಿಯ ಗೋಪುರವನ್ನು ಪ್ರವೇಶದ್ವಾರದಲ್ಲಿ ಚಿನ್ನದ ಲೇಪನಗಳಿಂದ ಇವರ ಮೂವರು ರಾಣಿಯರ ವಿಗ್ರಹಗಳೊಂದಿಗೆ 1827 ರಲ್ಲಿ ನಿರ್ಮಿಸಿರುತ್ತಾರೆ. ಇವರ ಅವಧಿಯಲ್ಲಿಯೇ ಉತ್ಸವಗಳನ್ನು ಮತ್ತು ಸಿಂಹವಾಹನ ಗಳನ್ನು 1843 ರಂದಲೂ ನಡೆಸುತ್ತಾ ಬಂದಿರುತ್ತದೆ.

ಇಲ್ಲಿ ಲಕ್ಷ್ಮಿ ನಾರಾಯಣ ಸ್ವಾಮಿ ಮತ್ತು ಮಹಾಬಲೇಶ್ವರ ಸ್ವಾಮಿ ಎಂಬ ಎರಡು ದೇವಸ್ಥಾನಗಳನ್ನೂ ಸಹ ಶಿವನ ಲಿಂಗಾಕಾರವಾಗಿ ನಿರ್ಮಿಸಲಾಗಿದೆ. ಇದನ್ನು 1128 ಕಿ.ಶ.ದಿಂದಲೂ ಹೊಯ್ಸಳ ಆಳ್ವಿಕೆಯಲ್ಲಿ ಚತುರೋಕ್ತಿಯಲ್ಲಿ ಈ ಆವರಣವನ್ನು ಮಭಲಾ ಅಥವಾ ಮಬ್ಬಲಾ ತೀರ್ಥ ಮತ್ತು ಹೊಯ್ಸಳ ರಾಜನಾದ ವಿಷ್ಣುವರ್ದನ ರ ಸೇವಾರ್ಥವಾಗಿ ನಿರ್ಮಿತವಾಗಿರುವುದು ಕಂಡು ಬರುತ್ತದೆ.

ದೇವಸ್ಥಾನದ ಪೂಜಾ ವೇಳೆ* ಪ್ರವೇಶ ದರಗಳು* ಮೈಸೂರಿನಿಂದ ದೇವಸ್ಥಾನ ವಿರುವ ದೂರ

07.30 am - 02.00 pm
03.30 pm - 06.00 pm
07.30 pm - 09.00 pm

ಉಚಿತ

ಮೈಸೂರಿನಿಂದ ದೇವಸ್ಥಾನ ವಿರುವ ದೂರ ರಸ್ತೆ ಮಾರ್ಗವಾಗಿ ಮೈಸೂರಿನಿಂದ 13 ಕಿ.ಮೀ ಅಂತರದಲ್ಲಿದೆ. ಕಾಲ್ನಡಿಗೆಯಲ್ಲಿ ತೆರೆಳುವವರಿಗೆ ಚಾಮುಂಡಿ ಬೆಟ್ಟದ ತಪ್ಪಲಿನಿಂದ (ಹಿಂಬದಿ) 1000 ಮೆಟ್ಟಿಲುಗಳು

ಯಿಂದ
ನಗರ ಸಾರಿಗೆ ನಿಲ್ದಾಣದಿಂದ ರೈಲ್ವೇ ನಿಲ್ದಾಣದಿಂದ ವಿಮಾನ ನಿಲ್ದಾಣದಿಂದ

201

ನಗರ ಸಾರಿಗೆ ಬಸ್ ನಿಲ್ದಾಣದಿಂದ ಎಲ್ಲಾ ಬಸ್ಸುಗಳು ನಗರ ಸಾರಿಗೆ->ಬಸ್ ನಿಲ್ದಾಣದ ಕಡೆಗೆ.->
201

401->ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ->178,313->ನ.ಸಾ.ನಿ. ->

201

ರಂಗನತಿಟ್ಟು ಪಕ್ಷಧಾಮ

ರಂಗನ ತಿಟ್ಟು ಪಕ್ಷಿಧಾಮವು ಮೈಸೂರಿನಿಂದ 19 ಕಿ.ಮೀ ಮತ್ತು ಶ್ರೀರಂಗ ಪಟ್ಟಣದಿಂದ 4 ಕಿ.ಮಿ ದೂರದಲ್ಲಿದೆ. ಹಿಂದೂ ದೇವರಾದ ಶ್ರೀ ಮಹಾ ವಿಷ್ಣುವ ಅಪರಾವತಾರವಾದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಸಹಾಯಾರ್ಥವಾಗಿ ಈ ಪಕ್ಷಿದಾಮವನ್ನು ಕಾವೇರಿ ನದಿಯ ದಡದಲ್ಲಿ ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಆರು ದ್ವೀಪಗಳ ಮಾದರಿಯಲ್ಲಿ 1940 ರಲ್ಲಿ ನಿರ್ಮಿಸಲಾಗಿದೆ.

ಈ ಪಕ್ಷಿಧಾಮವು ವಿವಿಧ ಜಾತಿಯ ಮಮ್ಮಲ್ಸ್ ಮತ್ತು ಆಗಂತುಕ ಪಕ್ಷಿಗಳನ್ನೋಳಗೊಂಡಿರುತ್ತದೆ. ಇವುಗಳನ್ನು ಬೊನ್ನೆಟ್ ಮಾಕ್ಯೆ, ಹಾರುವ ಫ಼ಾಕ್ಸ್ ಮತ್ತು ಇಂಡಿಯನ್ ಗ್ರೇ ಮೂಂಗೂಸ್ ಮಾದರಿಯ ಸಾಮಾನ್ಯ ಸಣ್ಣ ಮಮ್ಮಲ್ಸ್, ಮಾನಿಟರ್ ಹಲ್ಲಿಗಳು ಮತ್ತು ಸಿವೆಟ್. ಮಾರ್ಷ ಮೊಸಳೆಯನ್ನು ಮಗ್ಗರ್ ಮೊಸಳೆಗಳು ಒಲಸೇ ಬಂದಿರುವ ನೀರಿನ ಪಕ್ಷಿಗಳು ಮತ್ತು ಬಣ್ಣ ಬಣ್ಣದ ಸ್ವಾರ್ಕ್, ಏಷ್ಯನ್ ಒಪನ್ ಬಿಲ್ ಸ್ವಾರ್ಕ್, ಕಾಮನ್ ಸ್ವೂನ್ ಬಿಲ್, ಕಪ್ಪು ತಲೆಯ ಇಬಿಸ್, ಬಿಳಿ ಇಬಿಸ್, ಸಣ್ಣ ಸೀಟಿ ಬಾತು ಕೋಳಿ, ಇಂಡಿಯನ್ ಶ್ಯಾಗ್, ಸ್ವಾರ್ಕ್ ಬಿಲ್ ಡ್ ಕಿಂಗ್ ಫಿಷರ್ ಮತ್ತು ಸಾಮಾನ್ಯ ಪಕ್ಷಿಗಳಾದ ಇಗ್ರೆಟ್ಸ್, ಕಾರವೊರೆಂಟ್ಸ್, ಓರಿಯೆಂಟಲ್ ಡಾರ್ಟರ್ ಮತ್ತು ಹೆರಾನ್ಸ್ ಮುಂತಾದವುಗಳು ಈ ಪಕ್ಷಿದಾಮದಲ್ಲಿ ಪ್ರೇಕ್ಷಕರ ಮನಸ್ಸಿಗೆ ಬಹಳ ಮುದ ನೀಡುತ್ತವೆ. ಮತ್ತು ಸ್ಥಳೀಯ ಶಾಲಾ ಕಾಲೇಜುಗಳ ಮಕ್ಕಳಿಗೆ ಒಳ್ಳಯ ಮನೊರಂಜನಾ ಮತ್ತು ಪ್ರೇಕ್ಷಣೀಯ ಸ್ಥಳವಾಗಿರುತ್ತದೆ.

ಪ್ರವೇಶ ವೇಳೆ* ಪ್ರವೇಶ ದರಗಳು* ಮೈಸೂರು ನಗರದಿಂದ ಇರುವ ಅಂತರ

ಬೆಳಗ್ಗೆ 9.00 ರಿಂದ 6.00 ವರೆಗೆ

ಭಾರತೀಯ ನಾಗರೇಕರಿಗೆ ರೂ.10/- ಹೊರ ದೇಶದವರಿಗೆ ರೂ.50/-

ಮೈಸೂರು ನಗರದಿಂದ ಇರುವ ಅಂತರ ಮೈಸೂರಿನಿಂದ 19 ಕಿ.ಮೀ ಶ್ರೀರಂಗ ಪಟ್ಟಣದಿಂದ 4 ಕಿ.ಮೀ

ಯಿಂದ
ನಗರ ಸಾರಿಗೆ ನಿಲ್ದಾಣದಿಂದ ರೈಲ್ವೇ ನಿಲ್ದಾಣದಿಂದ ವಿಮಾನ ನಿಲ್ದಾಣದಿಂದ

307,313,313ಎ

ದಾಸಪ್ಪ ವೃತ್ತದ ಮಾರ್ಗವಾಗಿ->307
ಮೈಸೂರು ಗ್ರಾ.ಸ.ನಿಲ್ದಾಣಕ್ಕೆ ಬರುವ ಬಸ್ಸುಗಳು->313,313ಎ

401-> ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ->110->ನ.ಸಾ.ನಿ ->307
401-> ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ->313,313ಎ

ಮೈಸೂರು ಝೂ

ಮೈಸೂರು ಝೂ ಅಥವಾ ಶ್ರೀ ಚಾಮರಾಜೇಂದ್ರ ಮೃಗಾಲಯ ಗಾರ್ಡನ್ಸ್ ಭಾರತದಲ್ಲಿ ಅತೀ ಹಳೆಯ ಝೂ ಆಗಿರುತ್ತದೆ. ಮೃಗಾಲಯದಲ್ಲಿ ಅನೇಕ ಕಾಡು ಜಾತಿಯ ವಿವಿಧ ಪ್ರಾಣಿಗಳಿಗೆ ಅತ್ಯುತ್ತಮ ಆಲಯವಾಗಿದೆ. ಈ ಮೃಗಾಲಯದ ವೀಕ್ಷಣೆಯಿಂದ ಪ್ರವಾಸಿಗರು ತುಂಬಾ ಮುದಗೊಳ್ಳುತ್ತಾರೆ. ಮೈಸೂರು ನಗರದ ಮೃಗಾಲಯದಲ್ಲಿನ ಪ್ರಾಣಿಗಳ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡುವ ಮೂಲಕ ಪ್ರಮುಖ ತಾಣವೆನಿಸಿಕೊಂಡಿದೆ. ಮೈಸೂರು ಮೃಗಾಲಯದಲ್ಲಿ ವಿವಿಧ ಅಪರೂಪದ ಜಾತಿಗಳ ನೈಸರ್ಗಿಕ ಸಂಪನ್ನೂಲದ ಸಸ್ಯಗಳು ಮತ್ತು ಮರಗಳನ್ನು ಒಳಗೊಂಡಿದೆ. ಇನ್ನಾವುದೇ ಮೃಗಾಲಯಕ್ಕಿಂತ ಮೈಸೂರು ಮೃಗಾಲಯವು ಭಾರತದಲ್ಲೇ ಭಿನ್ನವಾಗಿರುತ್ತದೆ. ಮೈಸೂರು ನಗರದ ಮೃಗಾಲಯವು ವಿಶ್ವದ ಅತ್ಯುತ್ತಮ ಮತ್ತು ಹಳೆಯ ಮೃಗಾಲಯವೆಂದು ಹೇಳಲ್ಪಡುತ್ತದೆ.

ಮೈಸೂರು ಮೃಗಾಲಯವು ಶತಮಾನಕ್ಕಿಂತ ಹಳೆಯದ್ದಾಗಿದ್ದು ಒಂದು ಅಪೂರ್ವವಾದ ಇತಿಹಾಸವನ್ನು ಹೊಂದಿರುತ್ತದೆ. ಮೃಗಾಲಯವನ್ನು ಶ್ರೀ ಚಾಮರಾಜೇಂದ್ರ ಒಡೆಯರ್ ರವರು 1892 ನೇ ಇಸವಿಯಲ್ಲಿ ಹಸಿರು ಪರಿಸರದಂತಿದ್ದ ತೋಟದಲ್ಲಿ ನಿರ್ಮಾಣಮಾಡಿರುತ್ತಾರೆ. ಪ್ರಸ್ತುತ ಮೃಗಾಲಯವು ಸುಮಾರು 250 ಎಕರೆ ವಿಸ್ತೀರ್ಣದಲ್ಲಿ ವಿಸ್ತಾರಗೊಂಡಿರುತ್ತದೆ. ಮೊದಲಿಗೆ ಶ್ರೀಮಂತ ಕುಟುಂಬಗಳಿಗೆ ಮಾತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು ನಂತರ 1920 ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು, ದೇಶಕ್ಕೆ ಸ್ವಾತಂತ್ರ ಸಿಕ್ಕಿದ ನಂತರ ಮೈಸೂರು ಮಹರಾಜರು ಆಗಿನ ಮೈಸೂರು ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಗೆ ಕೊಡುಗೆಯಾಗಿ ಕೊಟ್ಟಿರುತ್ತಾರೆ

ಮೃಗಾಲಯದ ವೀಕ್ಷಣಾ ಸಮಯಗಳು* ಪ್ರವೇಶ ದರಗಳು* ಮೈಸೂರು ನಿಂದ ಅಂತರ

ಬೆಳಗ್ಗೆ 8.30 ರಿಂದ ಸಂಜೆ 5.30 ರವರೆಗೆ
ಮಂಗಳವಾರ ರಜೆ

ವಯಸ್ಕರು ರೂ 25/-
ಮಕ್ಕಳು (5 ರಿಂದ 12 ವರ್ಷ ) ರೂ 10/-

ಮೈಸೂರು ಮೃಗಾಲಯವು ನಗರದ ಹೃದಯಭಾಗದಲ್ಲಿದ್ದು, ನಗರ ಬಸ್ ನಿಲ್ದಾಣದಿಂದ 3 ಕಿ.ಮೀಗಳ ಮತ್ತು ಅರಮನೆಯಿಂದ 2 ಕಿ.ಮೀಗಳ ಅಂತರದಲ್ಲಿರುತ್ತದೆ.

ಯಿಂದ
ನಗರ ಸಾರಿಗೆ ನಿಲ್ದಾಣದಿಂದ ರೈಲ್ವೇ ನಿಲ್ದಾಣದಿಂದ ವಿಮಾನ ನಿಲ್ದಾಣದಿಂದ

201,200

ಸಿ.ಬಿ.ಎಸ್ ಗೆ ಬರುವ ಬಸ್ಸುಗಳು-> 201

401->ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ->178,110.315->ನ.ಸಾ.ನಿ.->

201,200

ಸೆಂಟ್ ಫಿಲೋಮಿನಾ ಚರ್ಚ್

ಸೆಂಟ್ ಫಿಲೋಮಿನಾ ರ ಚರ್ಚ್ಇಡೀ ದೇಶದಲ್ಲಿಯೇ ದೂಡ್ಡ ಚರ್ಚ್ ಆಗಿದ್ದು ಇದನ್ನು 1956 ರಲ್ಲಿ ನಿರ್ಮಾಣಮಾಡಲಾಗಿರುತ್ತದೆ.ಸುವರ್ಣಾಲಂಕೃತ ಚರ್ಚ್ಅನ್ನು ಸಂಜೆವೇಳೆಯಲ್ಲಿ ನೋಡಲು ಅದ್ಬುತವಾಗಿ ಕಾಣುತ್ತದೆ. ಸೆಂಟ್ ಫಿಲೋಮಿನಾ ಕೆಥಡ್ರಲ್ ಚರ್ಚ್ ಇದು ಭಾರತದಲ್ಲಿಯೇ ಅತ್ಯಂತಭವ್ಯವಾದಚರ್ಚಗಳಲ್ಲಿ ಒಂದಾಗಿದೆ. ಈ ಚರ್ಚ್ ನವಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿರುತ್ತದೆ

ಕ್ಯಾಥೆಡ್ರಲ್ ಅವಳಿ ಗೋಪುರಗಳು, ಎತ್ತರ 175 ಅಡಿಗಳಿದ್ದು , ಇದು ಒಂದು ವಿಶಿಷ್ಟ ಹೆಗ್ಗುರುತ್ತಾಗಿದ್ದು ಹಲವಾರು ಮೈಲಿಗಳ ದೂರದಿಂದ ಚರ್ಚ್ ಅನ್ನು ಕಾಣಬಹುದು. ಚರ್ಚಿನ ಮುಖ್ಯ ಹಾಲ್ ನಲ್ಲಿ 800 ಜನರು ಒಮ್ಮೆಲೆ ಕೂರಬಹುದಾಗಿರುತ್ತದೆ ಮತ್ತು ಚರ್ಚ್ ನ ಹೊರಾಂಗಣವು ಸುಂದರ ಬಣ್ಣ ಲೇಪಿತ ಗಾಜಿನ ಕಿಟಕಿಗಳಿಂದ ಕ್ರಿಸ್ತನ ಜನನ, ಲಾಸ್ಟ್ ಸಪ್ಪರ್, ಶಿಲುಬೆಗೇರಿಸಿದ, ಪುನರುತ್ಥಾನ ಮತ್ತು ಕ್ರಿಸ್ತ ನ ದೃಶ್ಯಗಳನ್ನು ಚಿತ್ರಿಸುವ ಜೊತೆ ಸುಂದರವಾಗಿ ರೂಪುಗೂಂಡಿರುತ್ತದೆ.

ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್ ಭಾರತದಲ್ಲಿನ ಹಳೆಯ ಚರ್ಚುಗಳಲ್ಲಿ ಒಂದಾಗಿದ್ದು . ಇದು ಸುಮಾರು 200 ವರ್ಷಗಳಷ್ಟು ಹಳೆಯದಾಗಿರುತ್ತದೆ. ಆರಂಭದಲ್ಲಿ ಸುಮಾರು 250 ವರ್ಷಗಳ ಹಿಂದೆ ಈ ಜಾಗದಲ್ಲಿ ಒಂದು ಸಣ್ಣ ಚರ್ಚ್ ಇತ್ತು. ಮಹಾರಾಜ ಕೃಷ್ಣರಾಜ ಒಡೆಯರ್ IV ಅವರ ಅಜ್ಜ ನಿರ್ಮಿಸಿದ ಸಣ್ಣ ಚರ್ಚ್ ಸ್ಥಳದಲ್ಲಿ ಅಕ್ಟೋಬರ್ 28, 1933 ರಂದು ಹೊಸ ಚರ್ಚ್ ಗೆ ಮಹಾರಾಜರು ಅಡಿಪಾಯ ಹಾಕಿದರು. ಒಂದು ಫ್ರೆಂಚ್ ದೇಶದ ಡಾಲಿ ಎಂಬ ಪ್ರಜೆಯೊಬ್ಬರು ಈ ಚರ್ಚ್ ಅನ್ನು ವಿನ್ಯಾಸಗೊಳಿಸಿರುತ್ತಾರೆ. ಕ್ಯಾಥೆಡ್ರಲ್ ನ ನೆಲಮಹಡಿಯು ಕ್ರಾಸ್ ರೂಪದಲ್ಲಿ ಹೊಂದಿರುತ್ತದೆ

ಚರ್ಚ್ ಪ್ರವೇಶದ ಸಮಯ* ಪ್ರವೇಶ ದರಗಳು* ಮೈಸೂರಿನಿಂದ ಅಂತರ

ಬೆಳಗ್ಗೆ 05:00 ರಿಂದ – ಸಂಜೆ 06:00ರ ವರೆಗೆ

ಉಚಿತ

ಮೈಸೂರು ನಗರ ಬಸ್ ನಿಲ್ದಾಣದಿಂದ 3 ಕಿ.ಮೀ ಹಾಗೂ ಮೈಸೂರು ಅರಮನೆಯಿಂದ 2 ಕಿ.ಮೀ ಅಂತರದಲ್ಲಿ ಇರುತ್ತದೆ.

ಯಿಂದ
ನಗರ ಬಸ್
ನಿಲ್ದಾಣ
ರೈಲ್ವೇ ನಿಲ್ದಾಣ ವಿಮಾನ ನಿಲ್ದಾಣ

ಫೈವ್ ಲೈಟ್ ವೃತ್ತದವರೆಗು 178,186,315A,110. ಅಲ್ಲಿಂದ ಕಾಲ್ನಡಿಗೆಯ ದಾರಿ.

ಮೈ.ಬ.ನಿಲ್ದಾಣದಿಂದ->ಫೈವ್ ಲೈಟ್ ವೃತ್ತದವರೆಗು 178,186,315A,110. ಅಲ್ಲಿಂದ ಕಾಲ್ನಡಿಗೆಯ ದಾರಿ.

401 ->ನ.ಬ.ನಿಲ್ದಾಣದಿಂದ ->ಫೈವ್ ಲೈಟ್ ವೃತ್ತದವರೆಗು 178,186,315A,110. ಅಲ್ಲಿಂದ ಕಾಲ್ನಡಿಗೆಯ ದಾರಿ.

ಕುಕ್ಕರಹಳ್ಳಿ ಕೆರೆ

ಕುಕ್ಕರಹಳ್ಳಿ ಕೆರೆಯು , ಒಂದು ತೀರದ ಜೊತೆ 58 ಹೆಕ್ಟೇರುಗಳಷ್ಟು ಸುಮಾರು ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿಸ್ತಾರವಾದ ಕ್ಯಾಂಪಸ್ನಲ್ಲಿಯೇ ಹರಡಿದೆ. ವರ್ಷ 1864 ರಲ್ಲಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ನಗರ ಹೊರವಲಯದ ಸುಮಾರು 10,000 ಎಕರೆ ಪ್ರದೇಶಕ್ಕೆ ನೀರನ್ನು ಒದಗಿಸಲು, ಕೆರೆಯನ್ನು ನಿರ್ಮಾಣ ಮಾಡಿದರು. ವಿಶ್ವ ಕವಿ ಕುವೆಂಪುರವರಿಗೆ ಅವರ ಹಲವು ಕೃತಿಗಳಿಗೆ ಕುಕ್ಕರಹಳ್ಳಿ ಕೆರೆಯು ಸ್ಪೂರ್ತಿಯಾಗಿರುತ್ತದೆ. ಈ ಸರೋವರದಲ್ಲಿ 180 ಕ್ಕೂ ಹೆಚ್ಚು ಅಧಿಕ ಜಾತಿಯ ಪಕ್ಷಿಗಳು ಪಸರಿಸುತ್ತವೆ ಮತ್ತು ಅವುಗಳಲ್ಲಿ ಕೆಲವು ನೀರಿನ ನೆಲೆಯಾಗಿದೆ. ದೂರದ ಸೈಬೀರಿಯಾದಿಂದಲೂ ಕೆಲವು ಪಕ್ಷಿಗಳು ಕುಕ್ಕರಹಳ್ಳಿ ಕೆರೆಗೆ ವಲಸೆ ಬಂದಿರುವ ಮಾಹಿತಿ ಇರುತ್ತದೆ.

ಉತ್ತರ ತೀರದಿಂದ ಮತ್ತು ಸುತ್ತುವರಿದಿರುವ ಮರಗಳಿಂದ ಕೂಡಿರುವ ಕುಕ್ಕರಹಳ್ಳಿ ಕೆರೆಯು ಆಕರ್ಷಕವಾಗಿರುತ್ತದೆ, ಕೆರೆಯ ಹಿಂಭಾಗದಲ್ಲಿ ಚಾಮುಂಡಿ ಬೆಟ್ಟವಿದ್ದು ಅದರ ವಿಹಂಗಮ ನೋಟ ಮತ್ತು ಮುಂಭಾಗದಲ್ಲಿನ ಜಿಲ್ಲಾಧಿಕಾರಿಯವರ ಕಚೇರಿಗಳ ಕೆರೆಯ ವೀಕ್ಷಣೆಗೆ ಆಕರ್ಷಕವಾಗಿದೆ.

ಕರೆಗೆ ಕಂಡುಬರುವ ಹಕ್ಕಿಗಳು ಸ್ಪಾಟ್ ಬಿಲ್ಡ್ ಪೆಲಿಕನ್ ಗಳು, ಸಣ್ಣ ನೀರುಕಾಗೆ, ಬಣ್ಣದ ಕೊಕ್ಕರೆಗಳು, ಮುಕ್ತ ಬಿಲ್ ಕೊಕ್ಕರೆಗಳು, ಯುರೇಶಿಯನ್ ಚಮಚಕೊಕ್ಕಿನ ಪಕ್ಷಿಗಳು, ಕಪ್ಪುನೆತ್ತಿಯ ನೈಟ್ ಬಕಗಳು ಮತ್ತು ಓರಿಯಂಟಲ್ ನೀರುಕಾಗೆಗಳ ಕಾಣಬಹುದಾಗಿದೆ.