ಐ.ಟಿ.ಎಸ್ ಬಗ್ಗೆ

ಐ.ಟಿ.ಎಸ್ (ಬುದ್ಧಿವಂತ ಸಾರಿಗೆ ವ್ಯವಸ್ಥೆ) ಎಂದರೇನು?

ಐ.ಟಿ.ಎಸ್ ಅನ್ನು ಬುದ್ಧಿವಂತ ಸಾರಿಗೆ ವ್ಯವಸ್ಥೆ ಎಂದು ಕರೆಯಲಾಗುತದೆ, ಇದರಿಂದ ವಾಹನಗಳ ಮೇಲ್ವಿಚಾರಣೆ ಮತ್ತು ವಾಹನಗಳ ಸಮೂಕವನ್ನು ಟ್ರಾಕಿಂಗ್ ಮಾಡಲು ಸಹಕಾರಿಯಾಗುತ್ತದೆ. ಸದರಿ ವ್ಯವಸ್ಥೆಯು ಭಾರತದಲ್ಲಿ ಅನುಷ್ಠಾನಗೂಳ್ಳುತ್ತಿರುವ ಮೊದಲ ಪ್ರಯತ್ನವಾಗಿದೆ. ಐ.ಟಿ.ಎಸ್ ತಂತ್ರಜ್ಞಾನವು ನಿಗಮದಲ್ಲಿ ಮೊದಲ ಬಾರಿಗೆ ಅದರಲ್ಲೂ ಮೈಸೂರು ನಗರ ಸಾರಿಗೆ ವಿಭಾಗದಲ್ಲಿ 500 ಬಸ್ ಗಳಿಗೆ, ಅನುಷ್ಠಾನಗೂಳಿಸುವ ಮುಖಾಂತರ, ನೈಜ ಸಮಯದ ಮಾಹಿತಿ ಪಡೆಯುವ ಸಲುವಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ 105 ಬಸ್ ನಿಲುಗಡೆಗಳಲ್ಲಿ, ಆರು ನಿಲ್ದಾಣಗಳಲ್ಲಿ ಮತ್ತು ನಗರ ಬಸ್ ನಿಲ್ದಾಣದ 45 ಅಂಕಣಗಳಲ್ಲಿ ಅನುಷ್ಠಾನಗೂಳಿಸಲಾಗುತ್ತಿದೆ. ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆ ಯೋಜನೆ ಪ್ರತ್ಯೇಕ ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆಗೂಳಿಸುವ ನಿಟ್ಟಿನಲ್ಲಿ ಮತ್ತು ಬಸ್ ಸೇವೆಗಳ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ಆಕರ್ಷಕ, ಅನುಕೂಲಕರ, ಆರಾಮದಾಯಕ, ಮೌಲ್ಯ ವರ್ಧಿತ ಸೇವೆಗಳನ್ನು ನೀಡುವ ಮೂಲಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ಅನುಷ್ಠಾನಗೂಳಿಸಲಾಗುತ್ತಿದೆ.

ಐ.ಟಿ.ಎಸ್ (ಬುದ್ಧಿವಂತ ಸಾರಿಗೆ ವ್ಯವಸ್ಥೆ) ಅವಶ್ಯಕತೆಯ ಉದ್ದೇಶ

ಮೈಸೂರು ನಗರದಲ್ಲಿ ವಾಹನಗಳ ಚಾಲನೆ ಮಾಡುವುದು ಒಂದು ದುಃಸ್ವಪ್ನ ಆಗಿದ್ದು ಮತ್ತು ಎಲ್ಲಾ ನಗರ ಕೇಂದ್ರಗಳಲ್ಲಿ ಹೆಚ್ಚು ಕಾಡುವ ಪಾರ್ಕಿಂಗ್ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಸಲುವಾಗಿ, ಈ ಹಿನ್ನೆಲೆಯಲ್ಲಿ, ಇನ್ನು ಹಲವು ಸಾರ್ವಜನಿಕರನ್ನು ನಗರ ಸಾರಿಗೆ ವ್ಯವಸ್ಥೆಯತ್ತ ಸೆಳೆಯಲು ಅನುಕೂಲವಾಗುವಂತೆ ಐ.ಟಿ.ಎಸ್ ಯೋಜನೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣದ ಬಗ್ಗೆ ಯೋಜನೆ ರೂಪಿಸುವ ಸಲುವಾಗಿ ಸೂಚಿತ ಬಸ್ ನಿಲ್ದಾಣಗಳಲ್ಲಿ /ಶೆಲ್ಟರ್ ಗಳಲ್ಲಿ /ಟರ್ಮಿನಲ್ ಗಳಲ್ಲಿ ಅಳವಡಿಸಿರುವ ಪ್ರದರ್ಶಕ ಫಲಕಗಳ ಮತ್ತು ಅಂತರ್ಜಾಲದ ಮುಖಾಂತರ ಎಲ್ಲಾ ನಗರ ಸಾರಿಗೆ ಬಸ್ ಆಗಮನ/ನಿರ್ಗಮನದ ಬಗ್ಗೆ ಮಾಹಿತಿ ಪಡೆದುಕೂಳ್ಳಲು ಅನುಕೂಲ ಮಾಡಿಕೂಡಲಾಗಿದೆ. ಇದರಿಂದ ಪ್ರಯಾಣಿಕರು ತಮ್ಮ ನಿಗದಿತ ಬಸ್ ಬರುವ ಬಗ್ಗೆ ಅವರು ನಿಂತ ಜಾಗದಲ್ಲಿಯೇ ಮಾಹಿತಿಗಳನ್ನು ಪಡೆಯುವುದರಿಂದ ಬಸ್ ನಿರ್ಗಮನ/ಆಗಮನ ದ ಬಗ್ಗೆ ಕಾಯುವ ಅಗತ್ಯವಿರುವುದಿಲ್ಲ, ಇದರಿಂದ ವಾಹನಗಳ ಅನಿಶ್ಚಿತತೆಯನ್ನು ತಡೆಬಹುದಾಗಿರುತ್ತದೆ. ಶ್ರೀ ಆರ್ ಶೇಖರ್ eGestalt, ರವರು ಈ ಯೋಜನೆಯ ಪ್ರಮುಖ ಸಲಹೆಗಾರರಾಗಿದ್ದು, ಅವರು ಹೇಳುವಂತೆ , ಜಿ.ಪಿ.ಆರ್.ಎಸ್ ಮತ್ತು ಇತರೆ ತಂತ್ರಜ್ಞಾನದ ಮುಖಾಂತರ ಕ.ರಾ.ರ.ಸಾ.ನಿಗಮ ದಿಂದ ಪ್ರಯಾಣಿಕರ ರಸ್ತೆ ದಟ್ಟಣೆ ಮತ್ತು ಸಾರಿಗೆ ಸಮಸ್ಯೆಗಳನ್ನು ಕಡಿಮೆಗೊಳಿಸಲು ಮತ್ತು ರಸ್ತೆ ಸಂಚಾರ ಅಸ್ತವ್ಯಸ್ತ, ಮತ್ತು ಅಪಘಾತಗಳು, ತುರ್ತು, ಇತ್ಯಾದಿ ಸಂದರ್ಭದಲ್ಲಿ ಕ.ರಾ.ರ.ಸಾ.ನಿಗಮ ಸೇವೆಗಳನ್ನು ಉತ್ತಮಗೂಳಿಸಲು ಅನುಕೂಲವಾಗುತದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ. ಎರಡು ರೀತಿಯಲ್ಲಿ ಸಂವಹನ ಧ್ವನಿ ಸೌಲಭ್ಯ, ಚಾಲಕ ಮತ್ತು ಕೇಂದ್ರ ನಿಯಂತ್ರಣ ಕೇಂದ್ರ ಬೆಂಬಲ, ತಾತ್ಕಾಲಿಕ ಅಥವಾ ಶಾಶ್ವತವಾಗಿ ಮುಂದಿನ ದಿನಗಳಲ್ಲಿ ಹೆಚ್ಚುವರಿ ಬಸ್ ಅನ್ನು ಹೊಸದಾಗಿ ನಿಯೋಜಿಸಲು. ಈ ವ್ಯವಸ್ಥೆಯ ವಾಹನಗಳ ಲಭ್ಯತೆ ಹೆಚ್ಚಳ ಬಳಕೆದಾರರ ಸುರಕ್ಷತೆ ಹೆಚ್ಚಳ, ಇಂಧನ ಬಳಕೆ ಹಾಗೂ ಹೊರಸೂಸುವಿಕೆಗಳನ್ನು ಕಡಿಮೆಗೊಳಿಸಲು, ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆಗೊಳಿಸಿ, ಸಂಚಾರ ಸಾಮರ್ಥ್ಯ ಸುಧಾರಿಸಿ, ಸಂಚಾರ ದಟ್ಟಣೆ ಕಡಿಮೆ, ಪರಿಸರ ಗುಣಮಟ್ಟ ಮತ್ತು ಶಕ್ತಿಯನ್ನು ಸುಧಾರಿಸಿ, ಕಾಯುವ ಸಮಯ ಮತ್ತು ಅನಿಶ್ಚಿತತೆಯನ್ನು ತಗ್ಗಿಸುವಲ್ಲಿ ದಕ್ಷತೆ, ಆರ್ಥಿಕ ಉತ್ಪಾದಕತೆಯನ್ನು ಸುಧಾರಿಸಲು ವ್ಯವಸ್ಥಿತಗೂಳಿಸಲಾಗಿರುತ್ತದೆ.

ಐ.ಟಿ.ಎಸ್. (ಬುದ್ಧಿವಂತ ಸಾರಿಗೆ ವ್ಯವಸ್ಥೆ) ತರಲು ಮೈಸೂರು ಆಯ್ಕೆ ?

ಮೈಸೂರು ನಗರದಲ್ಲಿನ ಐತಿಹಾಸಿಕ ಹಿನ್ನೆಲೆ, ಪ್ರವಾಸಿ ಚಟುವಟಿಕೆಗಳಿಂದ ಮಾದರಿ ಸ್ಥಳವಾಗಿರುವುದರಿಂದ ಮತ್ತು ವಾಹನ ದಟ್ಟಣೆ ಹೆಚ್ಚಿರುವುದರಿಂದ , ನಗರ ಗಾತ್ರದಲ್ಲಿ ಯೋಜನೆಯ ಮತ್ತು ಭೂಮಿಯ ಬಳಕೆ ಅಂದಾಜು 70% ಮಾಡಬಹುದಾಗಿರುವುದರಿಂದ. ಅಲ್ಲದೆ ಮೈಸೂರು ನಗರದಲ್ಲಿ ಎಲ್ಲಾ ಆಧುನಿಕ ಮೂಲಭೂತ ಸೌಲಭ್ಯಗಳನ್ನು ಹೊಂದಿರುವುದರಿಂದ , ಇತರೆ ರಾಜ್ಯಗಳಿಂದ ಹಲವು ಜನರನ್ನು ಆಕರ್ಷಿಸುವ ಸಲುವಾಗಿ ಮತ್ತು ನಗರದಲ್ಲಿನ ಅನೇಕ ಜನರಿಗೆ ಹೆಚ್ಚಿನ ಉದ್ಯೋಗ ನೀಡುವುದರ ಮುಖಾಂತರ ತಮ್ಮ ಜೀವನೋಪಾಯವನ್ನು ರೂಪಿಸಿಕೊಳ್ಳುವಂತೆ ಮಾಡಲು ಮತ್ತು ಇನ್ನು ಹಲವಾರು ಅವಕಾಶಗಳನ್ನು ನಗರದಲ್ಲಿ ಒದಗಿಸಲು ಮೈಸೂರನ್ನು ಆಯ್ಕೇ ಮಾಡಲಾಗಿರುತ್ತದೆ

ಐ.ಟಿ.ಎಸ್ (ಬುದ್ಧಿವಂತ ಸಾರಿಗೆ ವ್ಯವಸ್ಥೆ) ಯ ಉದ್ದೇಶ

ಕ.ರಾ.ರ.ಸಾ.ನಿಗಮವು ಮೈಸೂರು ನಗರ ಸಾರಿಗೆ ವಿಭಾಗದಲ್ಲಿನ 03 ಘಟಕಗಳಿಂದ ಒಟ್ಟಾರೇ 384 ಅನುಸೂಚಿಗಳನ್ನು 420 ವಾಹನಗಳ ಮುಖಾಂತರ ಕಾರ್ಯಚರಿಸುತ್ತಿರುತ್ತದೆ. ಮೈಸೂರು ನಗರದಲ್ಲಿನ ಪ್ರಸ್ತುತ ಸಾರ್ವಜನಿಕ ಸಾರಿಗೆ ಬಳಕೆಯು ಅಂಕಿ ಅಂಶಗಳ ಪ್ರಕಾರ ಸರಾಸರಿ ಶೇ 13 % ಇರುತ್ತದೆ. ನಗರದಲ್ಲಿ ನಡೆದುಕೊಂಡು ಮತ್ತು ದ್ವಿಚಕ್ರ ವಾಹನಗಳ ಮುಖಾಂತರ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಇನ್ನು ಹೆಚ್ಚಿನ ಪ್ರಯಾಣಿಕರನ್ನು ಸಾರ್ವಜನಿಕ ಸಾರಿಗೆಯತ್ತ ಸೆಳೆಯಲು ನಿಗಮವು ಉದ್ದೇಶ ಹೊಂದಿದೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ವಿಸ್ತರಿಸುವ ಮುಖೇನ ಉತ್ತಮ ಆರ್ಥಿಕ ವ್ಯವಸ್ಥೆಯನ್ನು, ಉತ್ತಮ ಸಮಾಜವನ್ನಾಗಿಸಲು ಹಾಗೂ ಸ್ವಚ್ಚ ಪರಸರವನ್ನು ರೂಪಿಸುವ ಗುರಿಯನ್ನು ಸಹ ಈ ವ್ಯವಸ್ಥೆ ಹೊಂದಿರುತ್ತದೆ.

ನಗರದಲ್ಲಿ ರಸ್ತೆಯಲ್ಲಿ ಇತರೆ ಸಾರಿಗೆಗಳಲ್ಲಿ ಸಂಚರಿಸುವ ವಾಹನ ಬಳಕೆದಾರರು ಇತ್ತೀಚಿನ ದಿನಗಳಲ್ಲಿನ ರಸ್ತೆಗಳಲ್ಲಿನ ಹೆಚ್ಚುತ್ತಿರುವ ವಾಹನಗಳ ದಟ್ಟಣೆ ಮತ್ತು ರಸ್ತೆಯಲ್ಲಿನ ಕ್ರೋಧಗಳ ವಿರುದ್ಧ ಸಾರ್ವಜನಿಕ ಸಾರಿಗೆಯನ್ನು ಬಳಸಲು ಉತ್ತಮ ಇಚ್ಚಾಶಕ್ತಿಯನ್ನು ಹೊಂದಿರುತ್ತಾರೆ. ಇಂಧನ ದರಗಳ ಹೆಚ್ಚಳದಿಂದಲೂ ಸಹ ಅನೇಕ ನಗರ ರಸ್ತೆ ವಾಹನ ಬಳಕೆದಾರರು ಸಹ ಸಾರ್ವಜನಿಕ ಸಾರಿಗೆ ಬಳಕೆ ಮಾಡುತ್ತಿರುವುದು ಒಂದು ಗಮನಾರ್ಹ ಅಂಶವಾಗಿರುತ್ತದೆ.ಇದರಿಂದ ಒಟ್ಟಾಗಿ ಅಭಿಪ್ರಾಯ ಪಡುವುದಾದರೇ ಕ.ರಾ.ರ.ಸಾ.ನಿಗಮವು ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಾರಿಗೆ ಸೇವೆ, ಅಗತ್ಯ ಮೂಲಭ್ಯೂತ ಸೌಲಭ್ಯಗಳನ್ನು ಕಲ್ಪಿಸುವ ಆಶಯವನ್ನು ಹೊಂದಿರುವುದರ ಮುಖಾಂತರ ಮೈಸೂರು ನಗರ ಸಾರಿಗೆಯಲ್ಲಿ ಕ.ರಾ.ರ.ಸಾ.ನಿಗಮದ ಹೆಸರನ್ನು ಇನ್ನು ಹೆಚ್ಚಿಗೆ ಪ್ರಸಿದ್ಧಿಗೂಳ್ಳುವಂತೆ ಮಾಡಲು ಉದ್ದೇಶಿಸಲಾಗಿದೆ.

ಐ.ಟಿ.ಎಸ್ (ಬುದ್ಧಿವಂತ ಸಾರಿಗೆ ವ್ಯವಸ್ಥೆ)ಯ ಮುಖ್ಯ ಅಂಶಗಳು

ಐ.ಟಿ.ಎಸ್ ನಲ್ಲಿ ವಾಹನ ಟ್ರ್ಯಾಕಿಂಗ್ ವ್ಯವಸ್ಥೆ, ನೈಜ ಸಮಯದ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಮತ್ತು ಕೇಂದ್ರೀಯ ನಿಯಂತ್ರಣಾ ಕೊಠಡಿಯ ವ್ಯವಸ್ಥೆ ಹೊಂದಿರುತ್ತದೆ. ಕೋರ್ ತಂತ್ರಜ್ಞಾನಗಳಾದ ಜಿಯಾಗ್ರಫಿಕಲ್ ಪೊಸಿಷನಿಂಗ್ ಸಿಸ್ಟಂ (ಜಿಪಿಎಸ್), ಎಲೆಕ್ಟ್ರಾನಿಕ್ ಡಿಸ್ಪ್ಲೇ ಸಿಸ್ಟಮ್ಸ್, ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ಒಳಗೊಂಡಿವೆ. ವಾಹನದಲ್ಲಿ ವಿ.ಎಂ.ಯು. ಅಳವಡಿಸಿ, ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಮುಖಾಂತರ ನಲ್ಲಿ ಉಪಗ್ರಹದಿಂದ ರೇಖಾಂಶ ಮತ್ತು ಅಕ್ಷಾಂಶ ಕಕ್ಷೆಗಳನ್ನು ಸ್ವೀಕರಿಸುತ್ತದೆ. ಸದರಿ ಸ್ವೀಕರಿಸಿದ ಮಾಹಿತಿಗಳನ್ನು ಜಿ.ಎಸ್.ಎಂ/ಜಿ.ಪಿ.ಆರ್.ಎಸ್(ವೈರ್ ಲೆಸ್ ಸಂಪರ್ಕದ) ಮುಖಾಂತರ ಕೇಂದ್ರೀಯ ನಿಯಂತ್ರಣಾ ಕೊಠಡಿಗೆ ಕಳುಹಿಸುತ್ತದೆ. ಇದರಿಂದ ಬಸ್ ನಿಲ್ದಾಣಗಳ/ಶೆಲ್ಟರ್ ಗಳಲ್ಲಿ/ಅಂಕಣಗಳಲ್ಲಿ/ಟರ್ಮಿನಲ್ ಗಳಲ್ಲಿನ ಪ್ರದರ್ಶನ ಫಲಕಗಳಲ್ಲಿ ಪ್ರಯಾಣಿಕರಿಗೆ ವಾಹನ ಕಾರ್ಯಚರಣೆಗಳ ಮಾಹಿತಿ ಲಭ್ಯವಾಗಲು ನೆರವಾಗುತ್ತದೆ.

ಐ.ಟಿ.ಎಸ್ (ಬುದ್ಧಿವಂತ ಸಾರಿಗೆ ವ್ಯವಸ್ಥೆ)ಯಲ್ಲಿ ಪ್ರಾಯಣಿಕರಿಗೆ ಅನುಕೂಲಗಳು

1 ಡಿಸ್ಪ್ಲೆ ಬೋರ್ಡ್ ಗಳು (ಪ್ರದರ್ಶನ ಪರದೆಗಳು)

1.1.ಬಸ್ ನಿಲ್ದಾಣದಲ್ಲಿನ ಡಿಸ್ಪ್ಲೆ ಬೋರ್ಡ್ ಗಳು (ಪ್ರದರ್ಶನ ಪರದೆಗಳು) : ಕ.ರಾ.ರ.ಸಾ.ನಿಗಮದಿಂದ ವಿದ್ಯುತ್ ಸೌಲಭ್ಯ ವಿರುವ 105 ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದ್ದು , ಈ ಬಸ್ ನಿಲ್ದಾಣಗಳಲ್ಲಿ 2 ಲೈನ್ /4 ಲೈನ್ ಗಳ ಡಿಸ್ಪ್ಲೆ ಬೋರ್ಡ್ ಗಳು (ಪ್ರದರ್ಶನ ಪರದೆಗಳು) ಅನ್ನು ಅಳವಡಿಸಲಾಗಿದ್ದು , ಇದು ನೈಜ ಸಮಯದ ಆಧಾರದ ಮೇಲೆ ಮುಂದಿನ ಬಸ್ ಆಗಮನ ನಿರೀಕ್ಷಿತ ಸಮಯವನ್ನು (ಇಟಿಎ) ಪ್ರದರ್ಶಿಸುತ್ತದೆ.
2. ಬಸ್ ಟರ್ಮಿನಲ್ ನಲ್ಲಿನ ಡಿಸ್ಪ್ಲೆ ಬೋರ್ಡ್ ಗಳು (ಪ್ರದರ್ಶನ ಪರದೆಗಳು): -ಕ.ರಾ.ರ.ಸಾ.ನಿಗಮ / ಟಿ.ಸಿ.ಎಸ್ ಯು ಪ್ರಯಾಣಿಕರಿಗೆ ವಿವಿಧ ಬಸ್ ಗಳ ಆಪೇಕ್ಷಿತ ನಿರ್ಗಮನದ ಸಮಯವನ್ನು (ETD) ಯನ್ನು ಪ್ರದರ್ಶಿಸಲೆಂದು 10 ಲೈನ್/16 ಲೈನ್ ಗಳ ಎಲ್.ಸಿ.ಡಿ ಡಿಸ್ಪ್ಲೇ ಬೋರ್ಡ್ ಅಳವಡಿಸುವ ಮುಖಾಂತರ ವ್ಯವಸ್ಥಿತಗೂಳಿಸಲಾಗಿರುತ್ತದೆ. ಈ ಪ್ರದರ್ಶನ ಫಲಕಗಳನ್ನು ನಗರ ಬಸ್ ನಿಲ್ದಾಣ (ಪ್ರವೇಶದಲ್ಲಿ ಮತ್ತು ಸುರಂಗಮಾರ್ಗ) ಸ್ಥಾಪನೆ ಮಾಡಲಾಗಿರುತ್ತದೆ. ಮೈಸೂರು ಮೃಗಾಲಯದಲ್ಲಿ, ಮೈಸೂರು ರೈಲು ನಿಲ್ದಾಣ, ಮೈಸೂರು ಗ್ರಾಮೀಣ ಬಸ್ ನಿಲ್ದಾಣ ಇತ್ಯಾದಿ ಮುಂತಾದ ಸ್ಥಳಗಳಲ್ಲಿ ಹಾದುಹೋಗುವ ಬಸ್ ಗಳ ಆಪೇಕ್ಷಿತ ನಿರ್ಗಮನದ ಸಮಯವನ್ನು (ETD) ಪ್ರದರ್ಶಿಸುತ್ತದೆ .
3.ಬಸ್ ಒಳಗಿನ ಪ್ರದರ್ಶನ ಪರದೆಗಳು: ಕ.ರಾ.ರ.ಸಾ.ನಿಗಮ / ಟಿ.ಸಿ.ಎಸ್ ಯು ಬಸ್ ನ ಒಳಗಡೆ LED ಡಿಸ್ಪ್ಲೆ ಬೋರ್ಡ್ ಗಳನ್ನು ಅಳವಡಿಸಿದ್ದು , ಈ ಪ್ರದರ್ಶನ ಫಲಕಗಳಲ್ಲಿ ಕಾರ್ಯಚರಣೆಗೆ ಸಂಬಂಧಪಟ್ಟಂತಾ ಘೋಷಣೆಗಳನ್ನು ಪ್ರದರ್ಶಿಸುವುದು ಮತ್ತು ಕೇಂದ್ರೀಯ ನಿಯಂತ್ರಣಾ ಕೊಠಡಿಯಿಂದ ಬರುವ ನೈಜ ಸಮಯದ ಸಂಚಾರ ಸಂದೇಶಗಳನ್ನು ಹಾಗೂ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಬರುವ ಪ್ರಸಕ್ತ ಮತ್ತು ಮುಂದಿನ ಬಸ್ ನಿಲ್ದಾಣಗಳ ಮಾಹಿತಿಯನ್ನು ಒದಗಿಸುತ್ತದೆ.

2.Audio ಪ್ರಕಟಣೆ

ಬಸ್ ಒಳಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಮುಂಬರುವ ಬಸ್ ನಿಲ್ದಾಣಗಳ ಹೆಸರನ್ನು ಕೇಳಲು ಮತ್ತು ನಂತರ ಸುಲಭವಾಗಿ ಆ ನಿಲ್ದಾಣಗಳನ್ನು ಗುರುತಿಸಬಹುದಾಗಿದೆ. ಇದರಿಂದ ಹೊಸದಾಗಿ ಮೈಸೂರು ನಗರಕ್ಕೆ ಬರುವ ಪ್ರಯಾಣಿಕರಿಗೆ ಹೆಚ್ಚು ಪ್ರಯೋಜನಕಾರಿ ಮತ್ತು ಸಹಕಾರಿಯಾಗುತ್ತದೆ.

3.GIS ನಕ್ಷೆ:

ಪ್ರಯಾಣಿಕರಿಗೆ ಸುಲಭವಾಗಿ ತಮ್ಮ ಬೆರಳಿನ ತುದಿಯಲ್ಲಿ ಒಂದು ಬಸ್ ನ ನೈಜ ಚಾಲನ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

4.ಎಸ್.ಎಂ.ಎಸ್

ಈ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ಬಸ್ ಆಗಮನ ಮತ್ತು ನಿರ್ಗಮನದ ಬಗ್ಗೆ ನೈಜ ಸಮಯದ ಮಾಹಿತಿಯನ್ನು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನಿಗದಿತ ಬಸ್ ಲಭ್ಯತೆಯನ್ನು ಒದಗಿಸುತ್ತದೆ. ಈ ನೈಜ ಸಮಯದ ಮಾಹಿತಿಯ ಸೌಲಭ್ಯದಿಂದ ಪ್ರಯಾಣಿಕರು ತಮ್ಮ ಮುಂದಿನ ಪ್ರವಾಸದ ಬಗ್ಗೆ ನಿರ್ಧರಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ SMS ನೋಡಿ.

5.ಇಂಟರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಂ (ಐ.ವಿ.ಆರ್.ಎಸ್)

ಇಂಟರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ (IVR) ವ್ಯವಸ್ಥೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಪೂರ್ವ ಮುದ್ರಿತ ಸಂದೇಶಗಳ ಮೂಲಕ ಪ್ರಯಾಣಿಕರ ಪ್ರಶ್ನೆಗಳಿಗೆ ಮಾಹಿತಿ ಒದಗಿಸುವುದು. ಈ ವ್ಯವಸ್ಥೆಯಲ್ಲಿ ನಗರ ಸಾರಿಗೆ ವಾಹನ ಕಾರ್ಯಾಚರಣೆಗಳ ನಿರ್ದಿಷ್ಟ ಮಾಹಿತಿಗಳನ್ನು ಪ್ರಯಾಣಿಕರು ಮೊಬೈಲ್ ಅಥವಾ ಸ್ಥಿರ ದೂರವಾಣಿಯ ಮುಖಾಂತರ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪಡೆಯಬಹುದಾಗಿರುತ್ತದೆ. ಫೋನ್. ಹೆಚ್ಚಿನ ಮಾಹಿತಿಗಾಗಿ IVRS ಪುಟವನ್ನು ಸಂಪರ್ಕಿಸಿ.