ಪಾಲುದಾರರು

ಎಸ್.ಯು.ಟಿ.ಪಿ ಬಗ್ಗೆ (ಸುಸ್ಥಿರವಾದ ನಗರ ಸಾರಿಗೆ ಯೋಜನೆ)

ಭಾರತ ಸರ್ಕಾರವು (GoI) ಸುಸ್ಥಿರ ನಗರ ಸಾರಿಗೆ ಯನ್ನು ರಾಷ್ಟ್ರೀಯ ನಗರ ಸಾರಿಗೆ ನೀತಿ (NUTP)ಯೊಂದಿಗೆ ಅಳವಡಿಸಿಕೊಂಡು ಸಾಧಿಸುವುದೇ ಒಂದು ಪ್ರಾಥಮಿಕ ಉದ್ದೇಶವಾಗಿ ಮಾರ್ಪಟ್ಟಿದೆ. ಪರಿಸರೀಯ ಅಪಾಯಗಳನ್ನು ಕಡಿಮೆ ಹೊಂದುವ ಪ್ರಯತ್ನಗಳು ಈ ವಸ್ತುನಿಷ್ಠ ಪ್ರಮುಖ ಅಂಶವನ್ನು ಈ ಯೋಜನೆಯಲ್ಲಿ ರೂಪಿಸುತ್ತವೆ. NUTP ಪರಿಧಿಯ ಅಡಿಯಲ್ಲಿ ಒಂದು ಹಸಿರು ಪರಿಸರದ ಅನುಷ್ಠಾನವನ್ನು GoI ಮತ್ತು ರಾಜ್ಯ / ಸ್ಥಳೀಯ ಸರ್ಕಾರಗಳ ನಡುವೆ ದೀರ್ಘಕಾಲಿಕ ಸಹಭಾಗಿತ್ವವನ್ನು ಬೆಳೆಸುವ ಉದ್ದೇಶದಿಂದ, ಭಾರತ ಸರ್ಕಾರದ (GoI) ಮತ್ತು ಗ್ಲೋಬಲ್ ಎನ್ವಿರಾನ್ಮೆಂಟ್ ಫೆಸಿಲಿಟಿ (GEF) ಬೆಂಬಲದೊಂದಿಗೆ ಸುಸ್ಥಿರ ನಗರ ಸಾರಿಗೆ ಯೋಜನೆಯನ್ನು ಪ್ರಸ್ತಾಪಿಸಿ ಆರಂಭಿಸಲಾಗಿದೆ . ಈ ಯೋಜನೆಯ (GEF) ಜಿ.ಇ.ಎಫ್ ನ ಒಟ್ಟು ಅನುದಾನವು ಯು.ಎಸ್ $ 25 ಮಿಲಿಯನ್ ಆಗಿದ್ದು ಹಾಗೂ ಯು.ಎಸ್ $ 105 ಮಿಲಿಯನ್ ಭಾರತ ಸರ್ಕಾರದ (GOI), ರಾಜ್ಯ ಸರ್ಕಾರಗಳ ಹಣಕಾಸು ನೆರವಿನೊಂದಿಗೆ ಮತ್ತು ಯೋಜನಾ ಅನುಷ್ಠಾನಗೂಳಿಸುವ ಸಂಸ್ಥೆಗಳೂಂದಿಗೆ (IA) ಮತ್ತು ಯು.ಎಸ್ $170 ಮಿಲಿಯನ್ ವಿಶ್ವಬ್ಯಾಂಕ್ ನ ಸಹಯೋಗದಲ್ಲಿ ಅನುಷ್ಠಾನಗೂಳಿಸಲಾಗುತ್ತಿರುತ್ತದೆ. ಈ ಯೋಜನೆಯು 2010 ಇಂದ ಪ್ರಾರಂಭಿಸಿ ನಾಲ್ಕು ವರ್ಷಗಳ ಅವಧಿಯಲ್ಲಿ ಜಾರಿಗೆ ತರಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಪಾಲುದಾರರಾಗಿ ನಗರಾಭಿವೃದ್ಧಿ ಸಚಿವಾಲಯ (MoUD), ಪರಿಸರ ಮತ್ತು ಅರಣ್ಯ ಸಚಿವಾಲಯ (MoEF), UNDP ಮತ್ತು ವಿಶ್ವ ಬ್ಯಾಂಕ್ ಸಹ ಇದರ ಪಾಲುದಾರರಾಗಿರುತ್ತದೆ. ನಗರಾಭಿವೃದ್ಧಿ ಸಚಿವಾಲಯವು (MoUD) ಈ ಯೋಜನಾ ಕಾರ್ಯದ ಅನುಷ್ಠಾನದಲ್ಲಿ ಸಮನ್ವಯಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಸಂಘಟಿತ ಮತ್ತು ವ್ಯಾಪಕವಾದ ಸಾಂಸ್ಥಿಕ ಮತ್ತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳು ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಸರ್ಕಾರದ ಮಟ್ಟದಲ್ಲಿ ಈ ಯೋಜನೆಯ ಅಭಿವೃದ್ಧಿ ಮತ್ತು ಅನುಷ್ಠಾನ ಅಗತ್ಯವಿದೆ. ಈ ಯೋಜನೆಯು ಯಶಸ್ವಿಯಾಗಿ ಈಗಾಗಲೇ ತೀವ್ರ ಮತ್ತು ವೇಗವಾಗಿ ಬೆಳೆಯುತ್ತಿರುವ ನಗರ ಸಾರಿಗೆ ಸವಾಲುಗಳನ್ನು ಪರಿಹರಿಸಲು ಸಾಕಷ್ಟು ಸಾಂಸ್ಥಿಕ ಮತ್ತು ಮಾನವ ಸಾಮರ್ಥ್ಯದ ನಿರ್ಮಿಸಲು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸುಸ್ಥಿರ ನಗರ ಸಾರಿಗೆ ಯೋಜನೆಯನ್ನು (SUTP) ಅಭಿವೃದ್ಧಿಪಡಿಸಿ ಅನುಷ್ಠಾನಗೂಳಿಸಲಾಗಿರುತ್ತದೆ. SUTP ಯ ಎರಡು ಮುಖ್ಯ ಉದ್ದೇಶಗಳೆಂದರೆ: ಭಾರತ ಸರ್ಕಾರದ (GOI) ಮತ್ತು ನಗರ ಸಾರಿಗೆಯ ಇನ್ಸಿಟಿಟ್ಯೂಟ್ (IUT) ಯ ಸಾಮರ್ಥವನ್ನು ಇನ್ನಷ್ಟು ಹೆಚ್ಚಿಸುವುದು ಮತ್ತು ಯೋಜನೆ, ಹಣಕಾಸು , ಅನುಷ್ಠಾನಗೂಳಿಸುವಿಕೆಯಲ್ಲಿ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ರಾಜ್ಯಗಳ ಮತ್ತು ನಗರಗಳು ಭಾಗವಹಿಸುವಂತೆ ಮಾಡುವುದು, ರಾಜ್ಯಗಳು ಮತ್ತು ನಗರಗಳು ನಗರ ಸಾರಿಗೆ ವ್ಯವಸ್ಥೆಗಳನ್ನುನಿರ್ವಹಿಸುವ ಬಗ್ಗೆ “ಹಸಿರು ಸಾರಿಗೆ” ಯೋಜನೆಗಳ ತಯಾರಿ ಮತ್ತು ಅನುಷ್ಠಾನಕ್ಕೆ ಸಹಾಯ ಗ್ಲೋಬಲ್ ಎನ್ವಿರಾನ್ಮೆಂಟ್ ಫೆಸಿಲಿಟಿ (GEF), ವಿಶ್ವ ಬ್ಯಾಂಕ್ ಮತ್ತು ಯುನೈಟೆಡ್ ನೇಶನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ ನ ಬೆಂಬಲ ಮತ್ತು (UNDP)ಯ ಸಹಯೋಗದೂಂದಿಗೆ SUTP ಸುಸ್ತಿರ ನಗರ ಸಾರಿಗೆ ಯೋಜನೆಯನ್ನು ಭಾರತ ಸರ್ಕಾರದಿಂದ ಅನುಷ್ಠಾನಗೂಳಿಸಲಾಗುತ್ತಿರುತ್ತದೆ. ನಗರಾಭಿವೃದ್ಧಿ (MoUD) ಸಚಿವಾಲಯ ಯೋಜನೆಗೆ ಮಧ್ಯವರ್ತಿಯಾಗಿ SUTP ಅನುಷ್ಠಾನಕ್ಕೆ ಮುಂದಿನ ನಾಲ್ಕು ವರ್ಷಗಳಲ್ಲಿ ಯೋಜಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ 1427.97 ಕೋಟಿಗಳಾಗಿದೆ http://www.sutpindia.com ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ.

ನಗರಾಭಿವೃದ್ಧಿ ಸಚಿವಾಲಯ

ನಗರಾಭಿವೃದ್ಧಿ ಸಚಿವಾಲಯವು , ನೀತಿಗಳನ್ನು ರಚಿಸಲು , ಕಾರ್ಯಕ್ರಮಗಳು ಬೆಂಬಲಿಸಲು ಮತ್ತು ಕೇಂದ್ರೀಯ ಸಚಿವಾಲಯದ ವತಿಯಿಂದ ಅಭಿವೃದ್ಧಿ ವಿಚಾರದಲ್ಲಿ ಆಗಿರುವ ಯೋಜನೆಗಳ ಮೇಲ್ವಿಚಾರಣೆ ಮಾಡುತ್ತದೆ. ರಾಜ್ಯ ಸರ್ಕಾರಗಳು ಮತ್ತು ಇತರೆ ಆಯಕಟ್ಟಿನ ಪ್ರಾಧಿಕಾರವು ದೇಶದ ನಗರಾಭಿವೃದ್ದಿಯಲ್ಲಿನ ಕಾರ್ಯ ಚಟುವಟಿಕೆಗಳನ್ನು ಸಂಯೋಜಿಸಲು ಕಾರಣವಾಗುತ್ತವೆ

http://www.urbanindia.nic.in ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ.

ಜಾಗತಿಕ ಪರಿಸರ ಸೌಲಭ್ಯ

ಜಾಗತಿಕ ಪರಿಸರ ಸೌಲಭ್ಯ (GEF) ವು 182 ಸದಸ್ಯ ಬಲದಲ್ಲಿ ಅಂತರಾಷ್ಟ್ರೀಯ ಸಂಸ್ಥೆಗಳ, ಸರ್ಕಾರೇತರ ಸಂಸ್ಥೆಗಳ ಸಹಬಾಗಿತ್ವದಲ್ಲಿ ಜಾಗತಿಕ ಪರಿಸರೀಯ ಸಮಸ್ಯೆಗಳಿಗೆ ಸ್ಪಂದಿಸಲು ಪಾತ್ರವಾಗಿವೆ. GEF ಜಿ.ಇ.ಎಫ್ ವು ಸ್ವತಂತ್ರ ಹಣಕಾಸು ಸಂಸ್ಥೆಯಾಗಿದ್ದು , ಇದು ಹವಾಮಾನ ಬದಲಾವಣೆ, ಅಂತಾರಾಷ್ಟ್ರೀಯ ನೀರಾವರಿ, ಭೂಮಿಯ ಸವೆತ, ಓಝೋನ್ ಪದರಗಳ ಸಂಬಂಧಿತ , ಮತ್ತು ನಿರಂತರ ಸಾವಯವ ಮಲಿನಕಾರಕಗಳು ಹಾಗೂ ಇತರೆ ಸಂಬಂಧಿಸಿದ ಯೋಜನೆಗಳಿಗೆ ಪರಿವರ್ತನೆಯ ಆರ್ಥಿಕಶಕ್ತಿಯ ಅಭಿವೃದ್ಧಿಶೀಲ ದೇಶಗಳಿಗೆ ಅನುದಾನವನ್ನು ಒದಗಿಸುತ್ತದೆ. ಈ ಯೋಜನೆಗಳಿಂದ ಜಾಗತಿಕ ಪರಿಸರಕ್ಕೆ ಉಪಯೋಗವಾಗುತ್ತದೆ, ಸಮರ್ಥನೀಯ ಜೀವನೋಪಾಯಕ್ಕೆ 1991 ರಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಪರಿಸರ ಸವಾಲುಗಳ ಪ್ರಚಾರ ಕಾರ್ಯವನ್ನು ಜಿ.ಇ.ಎಫ್ ನಿಂದ ಸ್ಥಾಪಿಸಲಾಯಿತು, GEF ಜಿ.ಇ.ಎಫ್ ಜಾಗತಿಕ ಪರಿಸರ ಯೋಜನೆಗಳನ್ನು ಸುಧಾರಿಸಲು ದೊಡ್ಡ ಹಣಕಾಸು ನೆರವು ಇಂದು ನೀಡುತ್ತಿದೆ . GEF ಜಿ.ಇ.ಎಫ್ ನಿಂದ ಪರಿವರ್ತನೆಯ ಉಳಿತಾಯದ ಹೆಚ್ಚು 9.2 ಶತಕೋಟಿ, ಹಣವನ್ನು 165 ಕ್ಕೂ ಹೆಚ್ಚು ಅಭಿವೃದ್ಧಿಶೀಲ ದೇಶಗಳಿಗೆ 2700 ಯೋಜನೆಗಳಿಗೆ ಹಾಗೂ ಸಹಭಾಗಿತ್ವದಲ್ಲಿ $ 40 ಬಿಲಿಯನ್ ಹಣವನ್ನು ಪೂರಕವಾಗಿ ಹಂಚಿಕೆ ಮಾಡಿದೆ. ಅದರೆ ಜಿ.ಇ.ಎಫ್ ಸಣ್ಣ ಧನಸಹಾಯದ ಕಾರ್ಯಕ್ರಮವನ್ನು (SGP) ಮೂಲಕ, 12,000 ಸಣ್ಣ ಅನುದಾನಗಳನ್ನು $ 495 ಮಿಲಿಯನ್ ಮೊತ್ತದ ಮೂಲಕ ಸಹ ನೇರವಾಗಿ ಸರ್ಕಾರೇತರ ಸಂಸ್ಥೆಗಳಿಗೂ ಮತ್ತು ಇತರೆ ಸಮುದಾಯ ಸಂಸ್ಥೆಗಳಿಗೂ ಸಹಾಯಧನವನ್ನು ವಿತರಿಸುತ್ತದೆ.

http://www.thegef.org ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ.

ವಿಶ್ವ ಬ್ಯಾಂಕ್

ಜ್ಞಾನ, ಕಲಿಕೆ ಮತ್ತು ಬಡತನ ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿಶ್ವ ಬ್ಯಾಂಕ್ ಇನ್ಸ್ಟಿಟ್ಯೂಟ್ (WBI) ಒಂದು ಜಾಗತಿಕ ಪರಿಹಾರ ರೂಪಿಸುವ ಸಂಸ್ಥೆಯಾಗಿದೆ. ಅವರ ಅಭಿವೃದ್ಧಿಯ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮತ್ತು ವಿಶ್ವದ ಆಧುನಿಕತೆಯ ಬಗ್ಗೆ “ಹೇಗೆ” ಸಂರ್ಪಕ ಸಾಧಿಸಬೇಕು ಎಂಬುದನ್ನು ಸ್ಪಷ್ಟವಾಗಿ ಈ ಸಂಸ್ಥೆಯ ಸಹಕಾರತ್ವದಲ್ಲಿ ಜಗತ್ತಿನ ಹೊಸತನದ ಬಗ್ಗೆ ಸಾಧಿಸಬಹುದಾಗಿರುತ್ತದೆ.

http://www.worldbank.org.in ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ.

ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್

ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ (UNDP) ಯು ಇದು ಯುನೈಟೆಡ್ ನೇಷನ್ ನ 'ಗ್ಲೋಬಲ್ ಡೆವಲಪ್ಮೆಂಟ್ ನೆಟ್ ವರ್ಕ್ ಆಗಿದೆ. ಇದು ದೇಶದಲ್ಲಿನ ಸಂಪನ್ಮೂಲಗಳ ಜ್ಞಾನ, ಅನುಭವ ಮತ್ತು ಜನರು ಉತ್ತಮ ಜೀವನ ಕಟ್ಟಲು ಸಹಾಯ ಮಾಡಲು ಮತ್ತು ಉತ್ತಮ ಬದಲಾವಣೆಗೆ ಹಾಗೂ ಸಂಪರ್ಕಕ್ಕೆ ಪ್ರತಿಪಾದಿಸುತ್ತದೆ . UNDP ಯು 177 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಅಭಿವೃದ್ಧಿ ಸವಾಲುಗಳನ್ನು ತಮ್ಮ ಪರಿಹಾರಗಳ ಮೂಲಕ ಸ್ಥಳೀಯ ಸಾಮರ್ಥ್ಯ ಬೆಳೆದಂತೆ ಕಾರ್ಯನಿರ್ವಹಿಸುತ್ತದೆ, UNDP ಯು ವ್ಯಾಪಕವಾಗಿ ಜನರ ಬೆಂಬಲದಂತೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತದೆ .

UNDP ಯು.ಎನ್.ಡಿ.ಪಿ ಯು ಹಲವು ದೇಶಗಳಿಗೆ ನೆರವಿನ ಹೆಚ್ಚು ಒತ್ತು ನೀಡುವುದಲ್ಲದೇ, ತಜ್ಞರ ಸಲಹೆ, ತರಬೇತಿ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನುದಾನದ ಬೆಂಬಲವನ್ನು ಸಹ ಒದಗಿಸುತ್ತದೆ. MDG ಗಳನ್ನು ಸಾಧಿಸಲು ಮತ್ತು ಜಾಗತಿಕ ಅಭಿವೃದ್ಧಿಗೆ ಪ್ರೋತ್ಸಾಹಿಸುವುದಕ್ಕಾಗಿ, UNDP ಯು.ಎನ.ಡಿ.ಪಿ ಯು ಬಡತನ ಮತ್ತು HIV / AIDS ನಿರ್ಮೂಲನೆಗೆ , ಪ್ರಜಾಪ್ರಭುತ್ವದ ಆಡಳಿತ, ಶಕ್ತಿ ಮತ್ತು ಪರಿಸರ, ಸಾಮಾಜಿಕ ಅಭಿವೃದ್ಧಿ ಮತ್ತು ಬಿಕ್ಕಟ್ಟು ನಿವಾರಣೆ ಮತ್ತು ಚೇತರಿಕೆ ಕಡೆಗೆ ಕೇಂದ್ರೀಕರಿಸುತ್ತದೆ. UNDP ಸಹ ಮಾನವ ಹಕ್ಕುಗಳ ಮತ್ತು ಅದರ ಎಲ್ಲಾ ಪ್ರೋಗ್ರಾಂಗಳನ್ನು ಮಹಿಳೆಯರ ಸಬಲೀಕರಣದ ರಕ್ಷಣೆಗೂ ಸಹ ಪ್ರೋತ್ಸಾಹಿಸುತ್ತದೆ.

http://www.in.undp.orgಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ.

ಪರಿಸರ ಮತ್ತು ಅರಣ್ಯ ಸಚಿವಾಲಯ

ಪರಿಸರ ಮತ್ತು ಅರಣ್ಯ (MoEF) ಸಚಿವಾಲಯವು ಭಾರತದ ಪರಿಸರ ಮತ್ತು ಅರಣ್ಯ ನೀತಿಗಳು ಮತ್ತು ಅದರ ಕಾರ್ಯಕ್ರಮಗಳು ಸರೋವರಗಳು ಮತ್ತು ನದಿಗಳು ಒಳಗೂಂಡಂತೆ ಅನುಷ್ಠಾನ ಆಗಿರುವುದಕ್ಕೆ, ಕೇಂದ್ರ ಸರ್ಕಾರದ ಆಡಳಿತಾತ್ಮಕ ರಚನೆಯಲ್ಲಿ ಮಧ್ಯವರ್ತಿಯಾಗಿ ಮೇಲ್ವಿಚಾರಣೆವಹಿಸುತ್ತದೆ. ಜೀವವೈವಿಧ್ಯ, ಅರಣ್ಯಗಳು ಮತ್ತು ವನ್ಯಜೀವಿ, ಪ್ರಾಣಿಗಳ ಕ್ಷೇಮಾಭಿವೃದ್ಧಿ ಖಾತರಿ ಮತ್ತು ಮಾಲಿನ್ಯ ತಡೆಗಟ್ಟಲು ಮತ್ತು ನಿವಾರಣಾ ಸೇರಿದಂತೆ ದೇಶದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಕ್ಕೆ ತರಲು ಸಹಕಾರಿಯಾಗಿದೆ.

ಈ ನೀತಿಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಳಿಸುವಾಗ ತಲೆದೋರುವ, ಸಚಿವಾಲಯ ಮಾನವ ಯೋಗಕ್ಷೇಮ ಸಮರ್ಥನೀಯ ಅಭಿವೃದ್ಧಿ ಮತ್ತು ಪರಿವರ್ತನೆಯ ತತ್ವದ ಮಾರ್ಗದರ್ಶನಗಳನ್ನು ಒಳಗೂಂಡಿದೆ.

http://moef.nic.inಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ.

ಐ.ಬಿ.ಐ ಗ್ರೂಪ್

ಐ.ಬಿ.ಐ ಗ್ರೂಪ್ ಸಂಸ್ಥೆಯು ಕೆನಡಾ, ಯುನೈಟೆಡ್ ಸ್ಟೇಟ್ಸ್, ಯುರೋಪ್, ಮಧ್ಯಪ್ರಾಚ್ಯ, ಏಷ್ಯಾ, ರಾಷ್ಟ್ರಗಳಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವೃತ್ತಿಪರ ಸೇವೆಗಳನ್ನು ಒದಗಿಸುತ್ತದೆ. ಈ ಕಂಪನಿಯ ಸೇವೆಗಳ ಸೌಲಭ್ಯಗಳಾದ , ಸಾರಿಗೆ ಜಾಲಗಳು, ಮತ್ತು ಬುದ್ಧಿವಂತ ವ್ಯವಸ್ಥೆ ನಿರ್ಮಿಸಲು, ನಗರ ಭೂಮಿ ಒಳಗೊಳ್ಳುವ ಬೆಳವಣಿಗೆಯ ವಿವಿಧ ಪ್ರದೇಶಗಳಲ್ಲಿ, ಕಾರ್ಯಾಚರಣೆಗಳ ಯೋಜನೆ, ವಿನ್ಯಾಸ, ಅನುಷ್ಠಾನ, ವಿಶ್ಲೇಷಣೆ, ಮತ್ತು ಇತರ ಸಲಹಾ ಸೇವೆಗಳು ಸೇರಿದಂತೆ ನಗರಗಳಲ್ಲಿನ ದೈಹಿಕ ಬೆಳವಣಿಗೆಯ ಮೇಲೆ ಹೆಚ್ಚು ಗಮನ ಹರಿಸಿ ಸೇವೆ ಸಲ್ಲಿಸುತ್ತದೆ. ಇದಲ್ಲದೇ ಈ ಕಂಪನಿಯು ನಗರ ಭೂಮಿ ಸೇವೆಗಳು ಭೂಬಳಕೆ ಯೋಜನೆ, ಮುನ್ಸಿಪಲ್ ಎಂಜಿನೀಯರಿಂಗ್, ನಗರ ವಿನ್ಯಾಸ, ಭೂಮಿ ಇಂಜಿನಿಯರಿಂಗ್, ವಾಸ್ತುಶಿಲ್ಪ, ಸಮೀಕ್ಷೆ ಮತ್ತು ನಕ್ಷೆ, ಸಾರ್ವಜನಿಕ ಔಟ್ರೀಚ್, ನೀರಿನ ಸಂಪನ್ಮೂಲಗಳ ನಿರ್ವಹಣೆ, ಮತ್ತು ರಿಯಲ್ ಎಸ್ಟೇಟ್ ಸಂಶೋಧನಾ ಸೇವೆಗಳನ್ನು ಸಹ ಒಳಗೂಂಡಿವೆ. ಇದಲ್ಲದೇ ವಾಸ್ತುಶಿಲ್ಪ, ಕಾರ್ಯಾಚರಣೆಯ ಪ್ರೋಗ್ರಾಮಿಂಗ್, ಯಾಂತ್ರಿಕ ಮತ್ತು ವಿದ್ಯುತ್ ಇಂಜಿನಿಯರಿಂಗ್ ಸೇವೆಗಳನ್ನು ಒಳಗೊಳ್ಳುತ್ತದೆ ಮತ್ತು ಆಂತರಿಕ ವಿನ್ಯಾಸ ಮತ್ತು ಸಾರಿಗೆ ಸೇವೆಯನ್ನು ಸಾರಿಗೆ ಯೋಜನೆ, ಸಂಚಾರ ಎಂಜಿನಿಯರಿಂಗ್, ಸಾರಿಗೆ ಯೋಜನೆ, ಹೆದ್ದಾರಿ ವಿನ್ಯಾಸ, ಸೇತುವೆ ನಿರ್ಮಾಣ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎನ್ವಿರಾನ್ಮೆಂಟಲ್ ಅಸೆಸ್ಮೆಂಟ್, ಮತ್ತು ನಿರ್ಮಾಣ ನಿರ್ವಹಣೆ ಕಾರ್ಯವನ್ನು ಸಹ ಒಳಗೊಂಡಿರುತ್ತದೆ. ಕಂಪನಿಯ ಬುದ್ಧಿಮತ್ತೆ ವ್ಯವಸ್ಥೆಗಳ ಸೇವೆಗಳ ಬುದ್ಧಿವಂತ ವ್ಯವಸ್ಥೆಯ ಎಂಜಿನಿಯರಿಂಗ್, ಸಾಫ್ಟ್ವೇರ್, ಬುದ್ಧಿವಂತ ಸಾರಿಗೆ ವ್ಯವಸ್ಥೆಯ ಎಂಜಿನಿಯರಿಂಗ್, ಐ.ಬಿ.ಐ ಗ್ರೂಪ್ ಕಾರ್ಯಕ್ರಮ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುತ್ತದೆ ಈ ಕಂಪನಿಯು ಸಾರ್ವಜನಿಕ ಸಂಸ್ಥೆಗಳ ಹಾಗೂ ವಸತಿ ಕಟ್ಟಡ, ಭೂಮಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ, ಸಾರಿಗೆ, ಸಂವಹನ ಮತ್ತು ಕೈಗಾರಿಕೆಗಳಲ್ಲಿನ ಯೋಜನೆಗಳನ್ನು ಸ್ಥಾಪಿಸಲು, ಇದು ರಾಷ್ಟ್ರೀಯ, ಪ್ರಾಂತೀಯ, ರಾಜ್ಯ ಮತ್ತು ಸ್ಥಳೀಯ ಸರ್ಕಾರದ ಕನ್ಸಲೆ ಟೆಂಟ್ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುತ್ತದೆ.

ಐ.ಬಿ.ಐ ಗ್ರೂಪ್ ಕಂಪನಿಯು ಹಿಂದೆ ಐ.ಬಿ.ಐ ಆದಾಯ ನಿಧಿ ಎಂದು ಇದ್ದು ಮತ್ತು ಜನವರಿ 2011 ರಲ್ಲಿ ಐ.ಬಿ.ಐ ಗ್ರೂಪ್ ಇಂಕ್ ಅದರ ಹೆಸರನ್ನು ಬದಲಾಯಿಸಲಾಯಿಸಿಕೂಂಡಿತು. ಐ.ಬಿ.ಐ ಗ್ರೂಪ್ ಅನ್ನು 1974 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದರ ಕೇಂದ್ರೀಯ ಕಛೇರಿಯು ಟೊರೊಂಟೊ ಮತ್ತು ಕೆನಡಾದಲ್ಲಿದೆ. ಐ.ಬಿ.ಐ ಗ್ರೂಪ್ LPಯ ಒಂದು ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

http://www.ibigroup.com ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್

ಟಿ.ಸಿ.ಎಸ್ ಲಿಮಿಟೆಡ್ ಸಂಸ್ಥೆಯು ಐಟಿ, ಸಲಹಾ ಮತ್ತು ವ್ಯಾಪಾರ ಪರಿಹಾರಗಳ ಸಂಸ್ಥೆಯಾಗಿದ್ದು ಜಾಗತಿಕ ವ್ಯವಹಾರ ಮತ್ತು ವಹಿವಾಟುಗಳಿಗೆ ಖಚಿತ ಫಲಿತಾಂಶಗಳನ್ನು ನೀಡುತ್ತದೆ. ಸಂಸ್ಥೆಯು ನೀಡುವ ಖಚಿತ ಭರವಸೆಯನ್ನು ಬೇರೆ ಯಾವುದೇ ಸಂಸ್ಥೆಯು ನೀಡಲಾಗುವುದಿಲ್ಲ . ಟಿಸಿಎಸ್ ಸಲಹಾ ನೇತೃತ್ವದಲ್ಲಿ , ಐಟಿ ಸಮಗ್ರ ಬಂಡವಾಳ, ಜೈವಿಕ , ಮೂಲಸೌಕರ್ಯ, ಎಂಜಿನಿಯರಿಂಗ್ ಮತ್ತು ಭರವಸೆಯ ಸೇವೆಗಳನ್ನು , ಗ್ಲೋಬಲ್ ನೆಟ್ವರ್ಕ್ ಡೆಲಿವರಿ ಮಾದರಿಯಲ್ಲಿ ವಿಶಿಷ್ಟವಾಗಿ ನೀಡುತ್ತದೆ. ತಂತ್ರಾಂಶ ಅಭಿವೃದ್ಧಿ ಶ್ರೇಷ್ಠತೆಯ ಮಾನದಂಡದಲ್ಲಿ ಗುರುತಿಸಲ್ಪಟ್ಟಿದೆ. ಟಿ.ಸಿ.ಎಸ್ ಟಾಟಾ ಗ್ರೂಪ್ಸ್ ನ ಒಂದು ಭಾಗವಾಗಿ, ಭಾರತದ ದೊಡ್ಡ ಔದ್ಯಮಿಕ ಸಾಮ್ರಾಜ್ಯದಲ್ಲಿ ಸಂಘಟಿತ ವ್ಯಾಪಾರ ಸಂಸ್ಥೆಯಾಗಿದ್ದು ಮತ್ತು 46 ದೇಶಗಳಲ್ಲಿ 3,44,000 ಕ್ಕಿಂತ ಹೆಚ್ಚು ವಿಶ್ವದ ಅತ್ಯುತ್ತಮ ತರಬೇತಿ ತಂತ್ರಜ್ಞ ಮತ್ತು ಸಲಹೆಗಾರರನ್ನು ಹೊಂದಿದೆ. ಮಾರ್ಚ್ 31 , 2015 ನೇ ವರ್ಷಾಂತ್ಯಾದ ಏಕೀಕೃತ ಆದಾಯ 15.5 ಶತಕೋಟಿ ಯು.ಎಸ್ ($) ಡಾಲರ್ ಆಗಿರುತ್ತದೆ ಮತ್ತು ಭಾರತದ ರಾಷ್ಟ್ರೀಯ ಷೇರು ವಿನಿಮಯ ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರದ ಪಟ್ಟಿಯಲ್ಲಿ ಸೇರಲ್ಪಟ್ಟಿದೆ.

http://www.tcs.com ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ.