ಮೈಸೂರು ನಗರ ಸಾರಿಗೆ ಸೇವೆಯಲ್ಲಿನ ಪ್ರಯಾಣಿಕರಿಗೆ
ವಿತರಿಸುವ ದಿನದ ಪಾಸ್ ಗಳು
ವೋಲ್ವೋ ರೂ 96/- ಪ್ರತಿದಿನ
ಸಾಮಾನ್ಯ ರೂ 50/- ಪ್ರತಿದಿನ
ನಗರ ಸಾರಿಗೆ ಸೇವೆಗಳ ಮಾಸಿಕ ಸೀಸನ್ ಪಾಸ್ ದರ ಪಟ್ಟಿ
ನಗರ ರೂ.620/-
ಉಪನಗರ ರೂ.820/-
ವೋಲ್ವೋ ರೂ.1087/-
ಗಮನಿಸಿ: ಪ್ರಯಾಣಿಕರ ಗುರುತಿನ ಚೀಟಿ ದರ ರೂ 50 / - ಪ್ರತಿ ವರ್ಷ
ರಿಯಾಯಿತಿ ಪಾಸ್ ಗಳು (ಶಾಸಕರು ಮತ್ತು ಇತರರು)
ರಾಜ್ಯದ ಶಾಸಕರಿಗೆ ಉಚಿತವಾಗಿ ನಿಗಮದ ಎಲ್ಲಾ ರೀತಿಯ ವಾಹನಗಳಲ್ಲಿ ಮುಕ್ತವಾಗಿ ಪ್ರಯಾಣಿಸಲು ಅನುಮತಿಸಲಾಗಿರುತ್ತದೆ.
ಮಾಜಿ ಶಾಸಕರು ಮತ್ತು ಅವರ ಒಬ್ಬರು ಸಹವರ್ತಿಯವರೊಂದಿಗೆ ಎಲ್ಲಾ ಸೇವೆಗಳಲ್ಲಿ ಪ್ರಯಾಣಿಸಲು ಅನುಮತಿ.
ಮಾನ್ಯತೆ ಪಡೆದ ಪತ್ರಕರ್ತರು ಅವರಿಗೆ ವಿತರಿಸಿರುವ ಕಾರ್ಡಿನೊಂದಿಗೆ ಎಲ್ಲಾ ಸಾರಿಗೆಗಳಲ್ಲಿ ಉಚಿತವಾಗಿ ರಾಜ್ಯದೊಳಗೆ ಸಂಚರಿಸಲು ಅವಕಾಶವಿರುತ್ತದೆ.
ಹಿರಿಯ ನಾಗರಿಕರಿಗೆ (ವಯಸ್ಸು 65 ಮತ್ತು ಮೇಲಿನ) -25% ರಿಯಾಯಿತಿಯೊಂದಿಗೆ ರಾಜಹಂಸ ಮತ್ತು ಕೆಳಗಿನ ಸೇವೆಗಳಲ್ಲಿ ಪ್ರಯಾಣಿಸಲು ಅನುಮತಿಸಿದೆ.
75 ವರ್ಷಗಳ ಮೇಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಒಬ್ಬ ಸಹವರ್ತಿಯವರೊಂದಿಗೆ ರಾಜಹಂಸ ಮತ್ತು ಕೆಳಗಿನ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಿದೆ.
ನಿಧನ ಹೂಂದಿರುವ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಗೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಉಚಿತ ಪ್ರಯಾಣ ಕೂಪನ್ ಗಳನ್ನು ಪಡೆಯಬಹುದು.
ಅಂಧರ ಉಚಿತ ಬಸ್ ಪಾಸ್: ಸಾಧಾರಣ ಮತ್ತು ವೇಗದೂತ ಸೇವೆಗಳಲ್ಲಿ ರಾಜ್ಯದ ಒಳಗೆ ಮುಕ್ತ ಪ್ರಯಾಣದ ಅವಕಾಶ.
ಅಂಗವಿಕಲರ ಪಾಸ್: ರೂ 660/- ವಾರ್ಷಿಕ ದರದ ಪಾವತಿಯಲ್ಲಿ ತಮ್ಮ ವಾಸಸ್ಥಳದಿಂದ – 100 ಕಿ ಮೀ ವರೆಗೆ ಉಚಿತ ಪ್ರಯಾಣದ ಅವಕಾಶವಿರುತ್ತದೆ.
ವಿದ್ಯಾರ್ಥಿಗಳಿಗೆ ರಿಯಾಯಿತಿ
ಪ್ರಾಥಮಿಕ ಶಾಲೆ ಪಾಸ್ (1 ನೇ ತರಗತಿಯಿಂದ 7ನೇ ತರಗತಿಯವರೆಗೆ) 10 ತಿಂಗಳಿಗೆ ರೂ.130/-
ಫ್ರೌಡಶಾಲೆ (8 ನೇ ತರಗತಿಯಿಂದ 10 ನೇ ತರಗತಿಯವರೆಗ) ಹುಡುಗರಿಗೆ 5 ತಿಂಗಳಿಗೆ ರೂ 405/- ಮತ್ತು 10 ತಿಂಗಳಿಗೆ ರೂ.730/-
ಫ್ರೌಡಶಾಲೆ (8 ನೇ ತರಗತಿಯಿಂದ 10 ನೇ ತರಗತಿಯವರೆಗ) ಹುಡುಗಿಯರಿಗೆ 5 ತಿಂಗಳಿಗೆ ರೂ 305/- ಮತ್ತು 10 ತಿಂಗಳಿಗೆ ರೂ.530/-
ಡಿಪ್ಲೊಮಾ/ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗೆ 5 ತಿಂಗಳ ರೂ 555/- ಮತ್ತು 10 ತಿಂಗಳು ರೂ 1030/-
ಐ.ಟಿ.ಐ. ವಿದ್ಯಾರ್ಥಿಗಳಿಗೆ 6 ತಿಂಗಳಿಗೆ ಪಾಸಿನ ದರ ರೂ.685/- ಮತ್ತು 12 ತಿಂಗಳಿಗೆ ರೂ. 1290 / -
ವೃತ್ತಿಪರ ಕೋರ್ಸ್ ಗಳಿಗೆ (BE/MBBS) 5 ತಿಂಗಳ ರೂ 805/ ಮತ್ತು 10 ತಿಂಗಳ ರೂ 1530/ ಮತ್ತು ಸಂಜೆ ಕಾಲೇಜು/ಪಿ.ಹೆಚ್.ಡಿ ರೂ 1330/-
ಸೂಚನೆ:- ಮೇಲಿನ ದರಗಳಿಗೆ ರೂ 80/ ಸಂಸ್ಕರಣಾ ಶುಲ್ಕ ಪ್ರತಿ ಪಾಸಿಗೆ + ರೂ 05/, ಅಪಘಾತ ಪರಿಹಾರ ಧನ ಶುಲ್ಕ ಪ್ರತಿ ತಿಂಗಳಿಗೆ ಸೇರಿರುತ್ತದೆ.