ಪ್ರಶ್ನೆಗಳು
ಐ.ಟಿ.ಎಸ್ ಎಂದರೇನು? ಮೈಸೂರಿನಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿರುವ ಇಂಟೆಲಿಜೆಂಟ್ (ಬುಧ್ದಿವಂತ) ಸಾರಿಗೆ ವ್ಯವಸ್ಥೆಯು ಪ್ರತ್ಯೇಕ ವೈಯಕ್ತಿಕ ವಾಹನಗಳ ಬಳಸುವಿಕೆಯ ಬದಲು ಸಾರ್ವಜನಿಕ ಬಸ್ ಸೇವೆಗಳ ಬಳಕೆಯನ್ನು ಪ್ರೋತ್ಸಾಹಿಸಲು ಆಧುನಿಕ ತಂತ್ರಜ್ಞಾನಗಳು ಬಳಸಿಕೊಂಡು ಆಕರ್ಷಕ, ಅನುಕೂಲಕರ, ಆರಾಮದಾಯಕ, ಮೌಲ್ಯ ವರ್ಧಿತ ಸೇವೆಗಳನ್ನು ನೀಡುವ ಮೂಲಕ ರಸ್ತೆ ದಟ್ಟಣೆ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸಲು ರೂಪಿಸಲಾಗಿರುವ ವಿನೂತನ ಪ್ರಯೋಗವೇ ಐ.ಟಿ.ಎಸ್ (ಬುದ್ಧಿವಂತ ಸಾರಿಗೆ ವ್ಯವಸ್ಥೆ). ಬುದ್ಧಿವಂತ ಸಾರಿಗೆ ವ್ಯವಸ್ಥೆಯಲ್ಲಿ ತಂತ್ರಜ್ಞಾನದಲ್ಲಿನ ವಿವಿಧ ಮಜಲುಗಳನ್ನು ಬಳಸಿ ಪ್ರಯಾಣಿಕರಿಗೆ ಒಂದು ಉತ್ತಮ ಅನುಭವವನ್ನು ರೂಪಿಸಲು ಸಹಕಾರಿಯಾಗಿದೆ. ಐ.ಟಿ.ಎಸ್ ನಲ್ಲಿ ಈ ಕೆಳಕಾಣಿಸಿದಂತೆ ಪ್ರಯೋಜನಗಳನ್ನು ಒದಗಿಸುತ್ತದೆ, ವ್ಯವಸ್ಥೆಯ ಲಭ್ಯತೆ ಹೆಚ್ಚಳ, ಬಳಕೆದಾರರ ಸುರಕ್ಷತೆ ಹೆಚ್ಚಳ , ಇಂಧನ ಬಳಕೆ ಹಾಗೂ ವಾಯುಮಾಲಿನ್ಯ ವನ್ನು ಕಡಿಮೆಗೊಳಿಸಲು , ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆಗೊಳಿಸಿ, ಸಂಚಾರ ಸಾಮರ್ಥ್ಯ ಸುಧಾರಿಸಿ, ಸಂಚಾರ ದಟ್ಟಣೆ ಕಡಿಮೆಮಾಡಿ, ಪರಿಸರೀಯ ಗುಣಮಟ್ಟ ಮತ್ತು ಶಕ್ತಿ ಸುಧಾರಿಸುದು, ಕಾಯುವ ಸಮಯ ಮತ್ತು ಅನಿಶ್ಚಿತತೆಯನ್ನು ತಗ್ಗಿಸುವಲ್ಲಿ ದಕ್ಷತೆ, ಆರ್ಥಿಕ ಉತ್ಪಾದಕತೆಯನ್ನು ಸುಧಾರಿಸುವುದು ಈ ತಂತ್ರಜ್ಞಾನದ ಮುಖ್ಯ ಉದ್ದೇಶವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ |
ಮೈಸೂರು ಐ.ಟಿ.ಎಸ್ ತಂತ್ರಜ್ಞಾನದ ಪಾಲುದಾರರು ಯಾರು? ಈ ತಂತ್ರಜ್ಞಾನದಲ್ಲಿನ ಪಾಲುದಾರರು ಪ್ರಯಾಣಿಕರು ಮೊದಲಾಗಿದ್ದು , ಇನ್ನುಳಿದಂತೆ ಈ ಕೆಳಕಾಣಿಸಿದ ಸಂಸ್ಥೆಗಳಾದ MoUD(ನಗರಾಭಿವೃದ್ಧಿ ಸಚಿವಾಲಯ), GEF (ಜಾಗತಿಕ ಪರಿಸರ ಸೌಲಭ್ಯ ಇಲಾಖೆ), WBI (ವಿಶ್ವ ಬ್ಯಾಂಕ್), UNDP(ಯು.ಎನ್.ಡಿ.ಪಿ), MoEF (ಎಂ.ಒ.ಇ.ಎಫ್) ಮತ್ತು ಕ.ರಾ.ರ.ಸಾ.ನಿಗಮವು (ಚಾಲನ ಸಿಬ್ಬಂದಿ, ಕಾರ್ಯಚರಣೆ ಮತ್ತು ಆಡಳಿತ ಸಿಬ್ಬಂದಿಗಳನೊಳಗಂಡಿರುತ್ತದೆ) ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್, ಆಗಿ ಐ.ಬಿ.ಐ ಗ್ರೂಪ್ ನವರಿದ್ದು, ಮತ್ತು ಯೋಜನೆ ಅನುಷ್ಠಾನಗೂಳಿಸಲು ಟಿ.ಸಿ.ಎಸ್ ಕಂಪನಿಯವರು ಕಾರ್ಯನಿರ್ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ |
ನಾನು ಪ್ರಯಾಣಿಕ- ನನಗೆ ಈ ತಂತ್ರಜ್ಞಾನದಲ್ಲಿ ಸಿಗುವ ಪ್ರಯೋಜನಗಳು? ಐ.ಟಿ.ಎಸ್ ತಂತ್ರಜ್ಞಾನವನ್ನು ಬಳಸುವುದರಿಂದ ಈ
ಕೆಳಕಾಣಿಸಿದ ಪ್ರಯೋಜನವನ್ನು ಪ್ರಯಾಣಿಕರು ಪಡೆಯಬಹುದಾಗಿರುತ್ತದೆ.
|
ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ನಕ್ಷೆ ಬಳಸಿ ಬಸ್ ಅನ್ನು ಹೇಗೆ ಟ್ರ್ಯಾಕ್ ಮಾಡಬಹುದು ? ಈ ಪ್ರಯಾಣಿಕರ ವೆಬ್ ಸೈಟ್ ನಲ್ಲಿ "ನಿಮ್ಮ ಬಸ್ ಟ್ರ್ಯಾಕ್" ಮೆನು ಮೇಲೆ ಕ್ಲಿಕ್ ಮಾಡಿದಾಗ. ಮೈಸೂರು ನಗರದ ಮಾರ್ಗಸೂಚಿಯು ಹೊಸ ವಿಂಡೋದಲ್ಲಿ ಕಾಣಿಸುತ್ತದೆ. ನೀವು ಮೊದಲು ನಿಮ್ಮ ಮಾರ್ಗ ಹುಡುಕುವ ಮೂಲಕ ನಿಮ್ಮ ಬಸ್ ಅನ್ನು ಟ್ರ್ಯಾಕ್ ಮಾಡಬಹುದು. ನಿಮ್ಮ ಬಸ್ "ಮೂಲ" ಬಸ್ ಸ್ಟಾಪ್ ಹುಡುಕಾಟವನ್ನು ಬಾಕ್ಸ್ ನಲ್ಲಿ ನಿಲ್ದಾಣದ ನಮೂದಿಸುವ ಮೂಲಕ ಪ್ರವೇಶಿಸಬಹುದು ಅಥವಾ ನೇರವಾಗಿ "ಮಾರ್ಗ ಸಂಖ್ಯೆ" ಹುಡುಕಾಟ ಬಾಕ್ಸ ನಲ್ಲಿ ಮಾರ್ಗ ಸಂಖ್ಯೆಯನ್ನು ನಮೂದಿಸುವ ಮೂಲಕ ಹುಡುಕಾಟ ಮಾಡಬಹುದು. ಆಯ್ದ ಮಾರ್ಗದಲ್ಲಿ ಚಲಿಸುವ ಎಲ್ಲಾ ಬಸ್ಸುಗಳು ನಿಮ್ಮ ಮಾರ್ಗದ ಆಯ್ಕೆಯ ನಂತರ "ಫಲಿತಾಂಶ" ಎಂಬ ವಿಭಾಗದ ಅಡಿಯಲ್ಲಿ ಕಾಣಬಹುದಾಗಿದೆ. |
ನಿಮ್ಮ ಬಸ್ ಹುಡುಕಾಟದಲ್ಲಿ ಎಸ್.ಎಂ.ಎಸ್ ಅನ್ನು ಹೇಗೆ ಬಳಸಬಹುದು? ಈ ಎಸ್ ಎಂ ಎಸ್ ಸೇವೆಯಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್ ಆಗಮನದ ಮತ್ತು ಲಭ್ಯತೆಯ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತದೆ. ಇದರಿಂದ ಪ್ರಯಾಣಿಕರು ತಮ್ಮ ಮುಂದಿನ ಪ್ರವಾಸದ ಬಗ್ಗೆ ನೈಜ ಬಸ್ ಆಗಮನದ ಮಾಹಿತಿಯಿಂದ ನಿರ್ಧರಿಸಬಹುದಾಗಿರುತ್ತದೆ. ನಿಮ್ಮ ಎಸ್ ಎಂ ಎಸ್ ಅನ್ನು 161 ಗೆ ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ |
ಐ.ವಿ.ಆರ್.ಎಸ್ ಸೇವೆಯನ್ನು ಬಳಸುವುದು ಹೇಗೆ? ಐ.ಟಿ.ಎಸ್ ನ ಇಂಟರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ (IVR) ವ್ಯವಸ್ಥೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಪೂರ್ವ ಮುದ್ರಿತ ಸಂದೇಶಗಳ ಮೂಲಕ ಕ.ರಾ.ರ.ಸಾ ನಿಗದಿಂದ ಬಸ್ ಗ್ರಾಹಕರ ಪ್ರಶ್ನೆಗಳಿಗೆ ಪ್ರತಿಸ್ಪಂದನೆಗಳು (ಉತ್ತರಗಳನ್ನು) ಒದಗಿಸುವುದು. IVR ವ್ಯವಸ್ಥೆಯಲ್ಲಿ ಕ.ರಾ.ರ.ಸಾನಿಗಮದ ಸಮಯ, ಮಾನವ ಬಲ ಮತ್ತು ವೆಚ್ಚ ಉಳಿಸುವ ನಿರೀಕ್ಷೆಯಿದೆ. ಈ ವ್ಯವಸ್ಥೆಯಲ್ಲಿ ನಗರ ಬಸ್ ಕಾರ್ಯಾಚರಣೆಗಳಿಗೆ ಸಂಬಂಧಪಟ್ಟಂತೆ ಮೊಬೈಲ್ ಅಥವಾ ಸ್ಥಿರ ದೂರವಾಣಿಗಳಿಂದ ಕರೆ ಮಾಡಿದರೆ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಗಳಲ್ಲಿ ನಿರ್ಧಿಷ್ಟ ಮಾಹಿತಿಯನ್ನು ಒದಗಿಸುತ್ತದೆ. ಐ.ವಿ.ಆರ್.ಎಸ್ ಸೇವೆಗೆ 1800-425-5220 ಅಥವಾ 0821-2520070 ಉಚಿತವಾಗಿ ಕರೆ ಮಾಡಬಹುದು. ಐ.ವಿ.ಆರ್.ಎಸ್ ಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ಕಿಸಿರಿ |
ಬಸ್ ಮಾರ್ಗ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವುದು ಹೇಗೆ?
ಕ.ರಾ.ರ.ಸಾ.ನಿಗಮವು ನಗರದಾದ್ಯಂತ ಅನೇಕ ಮಾರ್ಗಗಳಲ್ಲಿ ತನ್ನ ಬಸ್
ಸೇವೆಗಳನ್ನು ಕಾರ್ಯಚರಿಸುತ್ತದೆ. ಬಸ್ ಮಾರ್ಗ ಬಗ್ಗೆ ಹೆಚ್ಚು ತಿಳಿಯಲು |