ಮೈಸೂರು ಐ.ಟಿ.ಎಸ್ ನಲ್ಲಿ IVR ಸಿಸ್ಟಮ್ ಡಿಸೈನ್

ಐ.ಟಿ.ಎಸ್ ನಲ್ಲಿ IVRSನ ವ್ಯವಸ್ಥೆಯ ಉದ್ದೇಶ

ಮೈಸೂರು ಐ.ಟಿ.ಎಸ್ ನಲ್ಲಿ ಇಂಟರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ (IVR) ವ್ಯವಸ್ಥೆಯ ಉದ್ದೇಶ ಸಾಧ್ಯವಾದಷ್ಟು ಮಟ್ಟಿಗೆ ಪೂರ್ವ ಮುದ್ರಿತ ಸಂದೇಶಗಳ ಮೂಲಕ ಕ.ರಾ.ರ.ಸಾ.ನಿ ಬಸ್ ಗ್ರಾಹಕರ ಪ್ರಶ್ನೆಗಳಿಗೆ ಪ್ರತಿಸ್ಪಂದನಗಳು ಒದಗಿಸುವುದು. IVR ಸಿಸ್ಟಮ್ ಕ.ರಾ.ರ.ಸಾ.ನಿಗಮ ಸಮಯ, ಮಾನವ ಬಲ ಮತ್ತು ಹಣ ಉಳಿಸಲು ನಿರೀಕ್ಷೆಯಿದೆ. ಈ ವ್ಯವಸ್ಥೆಯಿಂದ ನಗರ ಸಾರಿಗೆ ವಾಹನಗಳ ಮಾರ್ಗ ಕಾರ್ಯಾಚರಣೆಗಳ ಬಗ್ಗೆ ಮೊಬೈಲ್ ಅಥವಾ ಸ್ಥಿರ ದೂರವಾಣಿಗಳಿಂದ ಕರೆ ಮಾಡಿದರೆ ಸದರಿ ವ್ಯವಸ್ಥೆಯು ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಗಳಲ್ಲಿ ನಿರ್ದಿಷ್ಠ ಮಾಹಿತಿಯನ್ನು ಒದಗಿಸುತ್ತದೆ.

ಐ.ವಿ.ಆರ್.ಎಸ್ ನಕ್ಷೆ


ಮೈಸೂರು ಐ.ಟಿ.ಎಸ್ ನಲ್ಲಿ IVRS (ಇಂಟರಾಕ್ಟೀವ್ ವಾಯ್ಸ್ ರೆಸ್ಪಾನ್ಸ್) ಈ ಕೆಳಗಿನಂತೆ ಬಳಸಬಹುದಾಗಿದೆ

1. ಕರೆಮಾಡಿ 1800-425-5220 ಅಥವಾ 0821-2520070.

2. ಒಳಬರುವ ಕರೆ ಆಧರಿಸಿ ಹತ್ತಿರದ ಸಾರ್ವಜನಿಕ ಟ್ರಾನ್ಸಿಟ್ ಸಹಾಯ ವಾಣಿಗೆ ನಿರ್ದೇಶಿಸುತ್ತದೆ. ಮೈಸೂರು, ಐ.ಟಿ.ಎಸ್ ನಲ್ಲಿನ ಮೈಸೂರು ಸಾರ್ವಜನಿಕ ಟ್ರಾನ್ಸಿಟ್ ನ ಸಹಾಯ ಲೈನ್ ಗೆ ಸಂಪರ್ಕಿಸುತ್ತದೆ

3. ಮೈಸೂರಿನಲ್ಲಿ ಒಮ್ಮೆ ಕರೆ ಮಾಡಿದಾಗ ಸಹಾಯವಾಣಿಯಿಂದ ಹೀಗೆ ಹೇಳುತ್ತದೆ : "ಕೆಎಸ್ಆರ್ಟಿಸಿ ಮೈಸೂರು ಮಿತ್ರ ಸೇವೆಗಳು ಸಹಾಯ ವಾಣಿಗೆ ಸುಸ್ವಾಗತ".

4. ಯಾವುದೇ ಸಮಯದಲ್ಲಿ, ನೀವು ಹಿಂದಿನ ಮೆನುವಿಗೆ ಮರಳಲು # ಒತ್ತಿ ಅಥವಾ ಮುಖ್ಯ ಮೆನು ಹೋಗಲು * ಒತ್ತಿರಿ

5. . ಇಂಗ್ಲೀಷ್ ನಲ್ಲಿ ಮುಂದುವರಿಯಲು ‘1’ಒತ್ತಿ ಅಥವಾ ಕನ್ನಡ ಮುಂದುವರಿಯಲು ‘2’ ಅನ್ನು ಒತ್ತಿ

6. ಉದಾಹರಣೆಗೆ ಪ್ರಯಾಣಿಕರು ಸಂಖ್ಯೆ 2 ಅನ್ನು ಒತ್ತಿ . (ಕನ್ನಡ ಭಾಷೆಯ ಆಯ್ಕೆ).

7. ನೈಜ ಸಮಯ ಬಸ್ ಆಗಮನ ನಿಲ್ಲಿಸಲು, ‘1’ ಒತ್ತಿ

      ನೀವು 4 ಅಂಕಿಯ ಬಸ್ ಸ್ಟಾಪ್ ಕೋಡ್ ತಿಳಿದಿದ್ದರೆ ದಯವಿಟ್ಟು ‘1’ನ್ನು ಒತ್ತಿ
     ನೀವು ಮಾರ್ಗ ಸಂಖ್ಯೆ ತಿಳಿದಿದ್ದರೆ. ‘2’ನ್ನು ಒತ್ತಿ
      ನೀವು ಕೋಡ್ ಅಥವಾ ಮಾರ್ಗಸಂಖ್ಯೆ ಗೊತ್ತಿಲ್ಲದಿದ್ದರೆ ‘0’ನ್ನು ಒತ್ತಿ

ಈ ವ್ಯವಸ್ಥೆಯಿಂದ ಬಸ್ ನಿಲ್ದಾಣದಲ್ಲಿ ಮುಂದಿನ 15 ನಿಮಿಷಗಳಲ್ಲಿ ಆಗಮಿಸುವ ಬಸ್ ಗಳ ವಿವರಗಳನ್ನು ಪ್ರಕಟಿಸುತ್ತದೆ.
ಉದಾಹರಣೆಗೆ: ಮಾರ್ಗ ಸಂಖ್ಯೆ 62 3 ನಿಮಿಷಗಳಲ್ಲಿ ರಾಮಕೃಷ್ಣ ನಗರಕ್ಕೆ ಬರುತ್ತದೆ ಎಂದು , ಮಾರ್ಗ ಸಂಖ್ಯೆ 303, 7 ನಿಮಿಷಗಳಲ್ಲಿ ಕೆ.ಆರ್.ಎಸ್ ಗೆ ಬರುತ್ತದೆ ಎಂದು, ಮಾರ್ಗ ಸಂಖ್ಯೆ 266, 12 ನಿಮಿಷಗಳಲ್ಲಿ ಇಲವಾಲಕ್ಕೆ ಬರುತ್ತದೆ ಎಂದು ಮತ್ತು 201 ಮಾರ್ಗ ಚಾಮುಂಡಿ ಬೆಟ್ಟದ ವಾಹನವು 14 ನಿಮಿಷಗಳಲ್ಲಿ ಬರುತ್ತದೆ ಎಂದು ತಿಳಿಸುತ್ತದೆ. ಯಾವುದು ತಿಳಿಯದಿದ್ದಾಗ ಈ ಕೆಳಕಂಡಂತೆ ಬಳಸುವುದು.

'0 ' ಒತ್ತಿದ್ದಾಗ ಗ್ರಾಹಕ ಸೇವಾ ಪ್ರತಿನಿಧಿಯವರನ್ನು ಸಂಪರ್ಕಿಸುತ್ತದೆ.

8. ಬಸ್ ಮಾರ್ಗಗಳ ಬಗ್ಗೆ ಮಾಹಿತಿಗಾಗಿ ದಯವಿಟ್ಟು,‘2’ನ್ನು ಒತ್ತಿ

ಬಸ್ ಮಾರ್ಗ ಸಂಖ್ಯೆ ನಮೂದಿಸಿ.

ಉದಾಹರಣೆಗೆ ಪ್ರಯಾಣಿಕರ ಮಾರ್ಗ ಸಂಖ್ಯೆ 303 ಆದರೆ . IVRS ನಿಂದ ಮಾರ್ಗ ಸಂಖ್ಯೆ 303 ಕೇಂದ್ರ ಬಸ್ ನಿಲ್ದಾಣ ಆರಂಭಗೊಂಡು ಮತ್ತು ಕೆ.ಆರ್.ಎಸ್ ಬರುತ್ತದೆ ಎಂದು ಹೇಳುತ್ತಾರೆ. ನೀವು ಸಿಬಿಎಸ್ ನಿಂದ ಕೆ.ಆರ್.ಎಸ್ ಗೆ ನಿಲ್ದಾಣಗಳು ಕೇಳಲು ಬಯಸಿದರೆ ದಯವಿಟ್ಟು 1 ಅನ್ನು ಒತ್ತಿರಿ ಎಂದು ತಿಳಿಸುತ್ತದೆ . ನೀವು ಕೆ.ಆರ್.ಎಸ್ ಅಣೆಕಟ್ಟೆಯಿಂದ ಸಿಬಿಎಸ್ ಗೆ ನಿಲ್ದಾಣಗಳು ತಿಳಿಯಲು ಬಯಸಿದಲ್ಲಿ ದಯವಿಟ್ಟು 2 ಅನ್ನು ಒತ್ತಿರಿ ಎಂದು ತಿಳಿಸುತ್ತದೆ. IVRS ನಲ್ಲಿ 62A, 62B ಮತ್ತು 62C ವಿವಿಧ ರೀತಿಯ ಮಾರ್ಗಗಳನ್ನು ಹುಡುಕಲು ಯೋಚಿಸಿ ಬಳಸಬಹುದಾಗಿರುತ್ತದೆ

9. ಪ್ರಯಾಣದ ಪಾಸ್ ಬಗ್ಗೆ ಕೇಳಲು, ‘3’ನ್ನು ಒತ್ತಿರಿ ಎಂದು ಹೇಳುತ್ತದೆ

ಉದಾಹರಣೆಗೆ,

1.ದೈನಂದಿನ ಪಾಸ್ ಗಳಿಗಾಗಿ ‘1’ನ್ನು ಒತ್ತಿ ಎಂದು ಹೇಳುತ್ತದೆ.

ವೋಲ್ವೋ ರೂ 96/- ಪ್ರತಿದಿನ

ಸಾಮಾನ್ಯ ರೂ 50/- ಪ್ರತಿದಿನ

2.. ಮಾಸಿಕ ಬಸ್ ಪಾಸ್ ಗಾಗಿ ‘2’ನ್ನು ಒತ್ತಿ ಎಂದು ಹೇಳುತ್ತದೆ.

ನಗರ ರೂ.620/-

ಉಪನಗರ ರೂ.820/-

ವೋಲ್ವೋ ರೂ.1087/-

ಗಮನಿಸಿ: ಪ್ರಯಾಣಿಕರ ಗುರುತಿನ ಚೀಟಿ ದರ ರೂ 50 / - ಪ್ರತಿ ವರ್ಷ

10. ನಾಶವಾದ ಅಥವಾ ಕಳೆದುಹೋದ ವಸ್ತುಗಳ ಬಗ್ಗೆ ವರದಿ ಮಾಡಲು 4 ಅನ್ನು ಒತ್ತಿರಿ.

ಅಂರ್ತಜಾಲದಲ್ಲಿ ದೂರುಗಳನ್ನು ಲಾಗ್ ಮಾಡಲು ‘1’ನ್ನು ಒತ್ತಿ ಅಥವಾ ಗ್ರಾಹಕ ಸೇವಾ ಪ್ರತಿನಿಧಿಯೊಂದಿಗೆ ಮಾತನಾಡಲು ದಯವಿಟ್ಟು ‘0’ನ್ನು ಒತ್ತಿ ಎಂದು ಹೇಳುತ್ತದೆ.

11. ನಮ್ಮ ಗ್ರಾಹಕ ಸೇವಾ ಪ್ರತಿನಿಧಿಯೊಂದಿಗೆ ಮಾತನಾಡಲು ಬಯಸಿದರೆ ‘0’ನ್ನು ಒತ್ತಿ

ಗಮನಿಸಿ:

ಟ್ಯಾನ್: ಪ್ರಾಥಮಿಕ ಮೆನು, ಕೆಂಪು: ಮುಖ್ಯ ಮೆನು, ಹಸಿರು: ಉಪ ಮೆನು, ಕಿತ್ತಳೆ: ಎಕ್ಸಿಟ್ ಮೆನು, ನೀಲಿ: IVRS ಕರೆಗಾಗಿ

ಗ್ರಾಹಕ ಸೇವಾ ಪ್ರತಿನಿಧಿಯ ಪಾತ್ರಗಳು ಮತ್ತು ಗ್ರಾಹಕ ರಕ್ಷಣೆ ಜವಾಬ್ದಾರಿಗಳು:

1. ಒಟ್ಟಾರೆ ಐ.ಟಿ.ಎಸ್ ಅಪ್ಲಿಕೇಶನ್ ವೈಶಿಷ್ಟ್ಯಗಳ ಬಗ್ಗೆ ತಿಳಿದಿರಬೇಕು.

2. ಪ್ರಯಾಣಿಕರಿಗೆ ನಗರ ಸಾರಿಗೆ ಕಾರ್ಯಚರಣೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಒದಗಿಸುವುದು.

3. ಪ್ರಯಾಣಿಕರುಗಳು ಕಳೆದುಹೋದ/ನಾಶವಾದ ವಸ್ತುಗಳ ಬಗ್ಗೆ ದೂರು ಮಾಡಿದಾಗ ಸ್ಪಂದಿಸುವುದು.

4. ನಷ್ಟವಾದ ಸ್ವತ್ತುಗಳ ವಿವರಗಳನ್ನು ಕ.ರಾ.ರ.ಸಾ.ನಿಗಮದ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸುವುದು.

5.ಗ್ರಾಹಕರ ದೂರುಗಳನ್ನು ಸ್ವೀಕರಿಸುವುದು.