
ನಿಮ್ಮ ಬಸ್ ಎಲ್ಲಿದೆ?
ಜಿ.ಐ.ಎಸ್ ಮೂಲಕ ವಾಹನವು ಇರುವ ಸ್ಥಳವನ್ನು ಮೈಸೂರು ನಗರದ ನಕ್ಷೆಯಲ್ಲಿ ಗುರುತಿಸಿ ಮಾಹಿತಿ ನೀಡುವ ವ್ಯವಸ್ಥೆ


ವೋಲ್ವೋ
ಆರಾಮದಾಯಕ ಸೇವೆಯನ್ನು ಒದಗಿಸುವ ಮೂಲಕ ಪ್ರಯಾಣಿಕರನ್ನು
ಸ್ವಂತ ವಾಹನಗಳಿಂದ ಸಾರ್ವಜನಿಕ ಸಾರಿಗೆಯತ್ತ ಆಕರ್ಷಿಸಲು ಪ್ರಾರಂಭಿಸಲಾದ
ವೊಲ್ವೋ ಸಾರಿಗೆಯು ಮೈಸೂರು ನಗರದ ಪ್ರತಿಷ್ಠಿತವಾದ ಸಾರಿಗೆ ಸೇವೆಯಾಗಿದೆ. ಈ
ಸಾರಿಗೆಯು ಹವಾ ನಿಯಂತ್ರಿತವಾಗಿದ್ದು ಬಾಗುವಿಕೆಯ ತಂತ್ರಜ್ಞಾನ, ನಿರ್ಗಮನ
ಮಹಡಿ ಹಾಗೂ ವ್ಹೀಲ್ ಛೆರ್'ಗೆ ಸ್ಥಳಾವಕಾಶದ ಮೂಲಕ ಯೂರೋ-೩ ವಾಹನಕ್ಕೆ
ಅನುರೂಪವಾಗಿದೆ.
ಸಾಮಾನ್ಯ ಸಾರಿಗೆ
ಸಾಮಾನ್ಯ ಸಾರಿಗೆ ಸೇವೆಗಳು ಪುಷ್ಪಕ್, ಪರಿಸರವಾಹಿನಿ, ಮಾರ್ಕೊಪೋಲೋ ಮೊದಲಾದ ಪ್ರಯಾಣಿಕ ಸ್ನೇಹಿ ಬಸ್ ಗಳನ್ನು ಒಳಗೊಂಡಿದ್ದು ಎಲ್ಲಾ ವರ್ಗದ ಪ್ರಯಾಣಿಕರಿಗೆ ಸುರಕ್ಷಿತ, ವಿಶ್ವಸಾರ್ಹ ಹಾಗೂ ಕೈಗೆಟಕುವ ಪ್ರಯಾಣ ದರದಲ್ಲಿ ಲಭ್ಯವಿವೆ