ಕ.ರಾ.ರ.ಸಾ.ನಿಗಮದ ಬಗ್ಗೆ
ಕ.ರಾ.ರ.ಸಾ.ನಿಗಮದ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕ.ರಾ.ರ.ಸಾ.ನಿ)ವು ರಸ್ತೆ ಸಾರಿಗೆ ಸಂಸ್ಥೆ ಕಾಯ್ದೆಯ 1950 ನಿಬಂಧನೆಗಳ ಅಡಿಯಲ್ಲಿ ಆಗಸ್ಟ್ 1961 ರಲ್ಲಿ ಸ್ಥಾಪಿಸಲಾಯಿತು. ಸಾಕಷ್ಟು ಸುರಕ್ಷಿತ ಮತ್ತು ಆರಾಮದಾಯಕ ಸೇವೆಯ ಮುಖಾಂತರ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯದ ಲಭ್ಯತೆ, ಕ.ರಾ.ರ.ಸಾ.ನಿಗಮವು ಸಾರ್ವಜನಿಕ ಸಾರಿಗೆ ಬೆಳೆಯುತ್ತಿರುವ ಸಮಾಜದಲ್ಲಿನ ಈ ಪ್ರಯತ್ನದಲ್ಲಿ ದೂರದ ಗುಡ್ಡಗಾಡಿನ ಪ್ರದೇಶಗಳವರೆಗೂ ಮುಖ್ಯವಾದ ಸಂಪರ್ಕ ಒದಗಿಸುತ್ತಿದೆ, ಕ.ರಾ.ರ.ಸಾ.ನಿಗಮವು ವಿಶ್ವಾಸಾರ್ಹತೆ ಮತ್ತು ಸುರಕ್ಷತೆಗೆ ಪಾತ್ರವಾಗಿ ತನ್ನ ಹೆಸರನ್ನು ಉತ್ತುಂಗಕ್ಕೆ ಕೊಂಡ್ಯೂಯ್ದಿರುತ್ತದೆ. ಆಗಸ್ಟ್ 1997 ರವರೆಗೆ, ಕ.ರಾ.ರ.ಸಾ.ನಿಗಮದಲ್ಲಿ 9500 ಅನುಸೂಚಿಗಳು ಮತ್ತು 10,400 ಬಸ್ ಗಳ ಕಾರ್ಯಚರಣೆ ಹೊಂದಿತ್ತು. ಆಗಸ್ಟ್ 1997 ರಲ್ಲಿ, ನಿಗಮವು ನಾಲ್ಕು ನಿಗಮಗಳಾಗಿ ಹೊಸದಾಗಿ ಮಾರ್ಪಾಡುಗೂಂಡು ಮೊದಲಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎಂದು ಹೊಸ ನಿಗಮವಾಯಿತು. ನಂತರ ನವೆಂಬರ್ 1997 ರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಇತ್ತೀಚೆಗೆ , ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NEKRTC)ಕ್ಕೊ ಸಹ ಗುಲ್ಬರ್ಗಾದಲ್ಲಿ ನಿಗಮದ ಕಚೇರಿಯನ್ನು ನಿರ್ಮಿಸಲಾಯಿತು. ನಿಗಮವು ಸಾಮಾನ್ಯ, ವೇಗದೂತ, ರಾಜಹಂಸ, ಶೀತಲ್, ಅಂಬಾರಿ, ಕರ್ನಾಟಕ ವೈಭವ ಮತ್ತು ಹವಾನಿಯಂತ್ರಿತ ವೋಲ್ವೋ " ಐರಾವತ" ಬಸ್ಸುಗಳಂತ ಎಲ್ಲಾ ರೀತಿಯ ಬಸ್ಸುಗಳ ಕಾರ್ಯಚರಣೆಯನ್ನು ಮಾಡುತ್ತಿದೆ. ಕ.ರಾ.ರ.ಸಾ.ನಿಗಮವು ಇತರೆ ಹೊರ ರಾಜ್ಯ ಮುಖ್ಯ ಸ್ಥಳ ಗಳಾದ ತಿರುವನಂತಪುರ ,ಮುಂಬೈ,ಚನೈ,ತಿರುಪತಿ ಮತ್ತು ವಿಜಯವಾಡಗಳಲ್ಲಿ ವಾಹನಗಳು ಕಾರ್ಯಚರಣೆಗೂಳಿಸುತ್ತಿದೆ . ಕ.ರಾ.ರ.ಸಾ.ನಿಗಮವು ಸಮಾಜದ ಪ್ರತಿಯೊಂದು ಹಂತದಲ್ಲಿಯೂ ಸಹ ವಿವಿಧ ರೀತಿಯ ಬಸ್ ಗಳಿಂದ ಕಾರ್ಯಚರಣೆಗೂಳ್ಳುತ್ತದೆ. ಕ.ರಾ.ರ.ಸಾ.ನಿಗಮದ ಮುಖ್ಯ ಉದ್ದೇಶವೆಂದರೆ ಹೊಸ ಅನ್ವೇಷಣೆಗಳಲ್ಲಿ ಹೊಸ ಸವಾಲುಗಳನ್ನು ಹುಡುಕುವ ಸಲುವಾಗಿ ತನ್ನ ಇತರೆ ಮೂರು ಸಂಸ್ಥೆಗಳಾದ ಬಿ.ಎಂ.ಟಿ.ಸಿ , ವಾ.ಕ.ರಾ.ಸಾ.ಸಂ ಮತ್ತು ಈ.ಕ.ರಾ.ಸಾ.ಸಂ ಗಳೂಂದಿಗೆ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿರುತ್ತದೆ. |
ಕಛೇರಿ ಮತ್ತು ಇತರ ಸೌಲಭ್ಯಗಳು ಕ.ರಾ.ರ.ಸಾ.ನಿಗಮವು ಬೆಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದೆ. ವಿಭಾಗೀಯ ಕಛೇರಿಗಳು: 15 (ಹೊಸದಾಗಿ ತೆರೆಯಲಾದ ಪುತ್ತೂರು ವಿಭಾಗ ಸೇರಿದಂತೆ) ಬಸ್ ಡಿಪೋಗಳು 72 , ಬಸ್ ನಿಲ್ದಾಣಗಳು: 128 ಎಲ್ಲಾ 7599 ವಾಹನಗಳ ಒಟ್ಟು ದಿನವಂದಕ್ಕೆ ಪರಿಣಾಮಕಾರಿ 24.91 ಲಕ್ಷ ಕಿ.ಮೀಗಳು, 6881 ಅನುಸೂಚಿಗಳೂಂದಿಗೆ ಕಾರ್ಯಚರಿಸುತ್ತಿದ್ದು ದಿನಕ್ಕೆ ಸರಾಸರಿ ಸಂಚಾರ ಆದಾಯ 589.78 ಲಕ್ಷ 23.60 ಲಕ್ಷ ಸರಾಸರಿ ಪ್ರಯಾಣಿಕರು ಮತ್ತು 34019 ಸಿಬ್ಬಂದಿಗಳು, 10 ಬಸ್ ಬಾಡಿಬಿಲ್ಡಿಂಗ್ ಕಾರ್ಯಗಾರಗಳು, ಒಂದು ಮುದ್ರಣಾಲಯ, 3 ಚಾಲಕ ಮತ್ತು ತರಬೇತಿ ಸಂಸ್ಥೆಗಳು ಹಾಗೂ ಇತರೆ 02 ಆಸ್ಪತ್ರೆಯನ್ನು ಹೊಂದಿದ್ದು ಮತ್ತು ಅಧಿಕಾರಿಗಳಿಗೆ /ನೌಕರರಿಗೆ 782 ಕ್ವಾರ್ಟರ್ಸ್ ಗಳು ಹಾಗೂ ಒಂದು ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ನಿಗಮವು ಹೊಂದಿರುತ್ತದೆ. |
ಪ್ರಶಸ್ತಿಗಳು ಮತ್ತು ಮಾನ್ಯತೆ
|