1. ಕ.ರಾ.ರ.ಸಾ.ನಿಗಮಕ್ಕೆ ಸಂದ ಸ್ಕಾಚ್ ಡಿಜಿಟಲ್ ಇನ್ ಕ್ಲೂಷನ್ ಸ್ವರ್ಣ ಪ್ರಶಸ್ತಿ-2012

2. ಮೈಸೂರು ನಗರ ಸಾರಿಗೆ ಸೇವೆಗಳು ಈಗ ಬುಧ್ಧಿವಂತಿಕೆಯಿಂದ ಕೂಡಿದೆ.

1. ಕ.ರಾ.ರ.ಸಾ.ನಿಗಮಕ್ಕೆ ಸಂದ ಸ್ಕಾಚ್ ಡಿಜಿಟಲ್ ಇನ್ ಕ್ಲೂಷನ್ ಸ್ವರ್ಣ ಪ್ರಶಸ್ತಿ-2012

      ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೈಸೂರು ನಗರದ ಎಲ್ಲಾ ನಗರ ಸಾರಿಗೆ ಬಸ್ ಗಳಲ್ಲಿ ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತಿದೆ. ಭಾರತದಲ್ಲಿಯೇ ಪ್ರಪ್ರಥಮವಾಗಿ ಈ ವಿನೂತನ ಯೋಜನೆಯನ್ನು ಜಾರಿಗೊಳಿಸುವಲ್ಲಿ ನಿಗಮದ ಶ್ರಮವನ್ನು ಗುರುತಿಸಿ, ಸ್ಕಾಚ್ ಗ್ರೂಪ್ ರವರು 18ನೇ ಸೆಪ್ಟೆಂಬರ್ 2012ರಂದು ನವದೆಹಲಿಯಲ್ಲಿ ನಡೆದ ಮೂವತ್ತನೆಯ ಸ್ಕಾಚ್ ಸಮ್ಮೇಳನದಲ್ಲಿ " ಸ್ಕಾಚ್ ಡಿಜಿಟಲ್ ಇನ್ ಕ್ಲೂಷನ್ ಸ್ವರ್ಣ ಪ್ರಶಸ್ತಿ - 2012ನ್ನು ಕ.ರಾ.ರ.ಸಾ.ನಿಗಮಕ್ಕೆ ಪ್ರಧಾನ ಮಾಡಿರುತ್ತಾರೆ.

      ಶ್ರೀ. ಎಸ್. ಮಲ್ಲಿಕಾರ್ಜುನ ಮುಖ್ಯ ಯಾಂತ್ರಿಕ ಅಭಿಯಂತರರು (ಉ) ರವರು ಶ್ರೀ ಜೆ ಸತ್ಯನಾರಾಯಣ, ಕಾರ್ಯದರ್ಶಿಗಳು, ವಿದ್ಯುನ್ಮಾನ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಭಾರತಸರ್ಕಾರ ಇವರಿಂದ " ಸ್ಕಾಚ್ ಡಿಜಿಟಲ್ ಇನ್ ಕ್ಲೂಷನ್ ಸ್ವರ್ಣ ಪ್ರಶಸ್ತಿ-2012" ಸ್ವೀಕರಿಸಿದರು. ಚಿತ್ರದಲ್ಲಿ ಶ್ರೀ.ಸಮೀರ್ ಕೊಚ್ಚಾರ್, ಅಧ್ಯಕ್ಷರು, ಸ್ಕಾಚ್ ಗ್ರೂಪ್ ಹಾಗೂ ಶ್ರೀಮತಿ. ಮನೀಷಾ ಕೊಚ್ಚಾರ್, ನಿರ್ದೇಶಕರು ಸ್ಕಾಚ್ ಡೆವೆಲಪ್ ಮೆಂಟ್ ಫೌಂಡೇಶನ್ ರವರನ್ನು ಕಾಣಬಹುದಾಗಿದೆ.


2. ಮೈಸೂರು ನಗರ ಸಾರಿಗೆ ಸೇವೆಗಳು ಈಗ ಬುಧ್ಧಿವಂತಿಕೆಯಿಂದ ಕೂಡಿದೆ.

  • ಈ ಬುಧ್ಧಿವಂತ ಸೇವೆಯು ನಿಮಗೆ ಆಪ್ತ ಮಿತ್ರ (ಸ್ನೇಹಿತ) ನಂತೆ ನೆರವಾಗುವಂತೆ ಅನುಷ್ಠಾನ ಮಾಡಲಾಗುತ್ತಿದೆ.
  • ಈ ಸೇವೆಯು ದೇಶದಲ್ಲಿಯೇ ಮೊದಲ ಪ್ರಯತ್ನವಾಗಿರುತ್ತದೆ
  • ಶೀಘ್ರವೇ ಈ ಸೇವೆಯು ಸಾರ್ವಜನಿಕ ಸೇವೆಗಾಗಿ ಲಭ್ಯವಾಗುತ್ತದೆ.

      ಈ ರೀತಿಯ ಮೊದಲ ಬುದ್ಧಿವಂತಿಕೆಯ ಸಾರಿಗೆ ಸೇವೆಯು (ಐ.ಟಿ.ಎಸ್ ) ಮೈಸೂರು ನಗರದಲ್ಲಿ ಪ್ರಪ್ರಥಮವಾಗಿ ಅಳವಡಿಸಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ಈ ವ್ಯವಸ್ಥೆಯು ಸೇವೆಗೆ ಸಿದ್ಧವಾಗುತ್ತದೆ ಮತ್ತು ಪ್ರಸ್ತುತ ಅಗತ್ಯವಿರುವ ಹಾರ್ಡ್ ವೇರ್ ಮತ್ತು ತಂತ್ರಜ್ಙಾನಗಳ ಅಳವಡಿಕೆ ಕಾರ್ಯವನ್ನು ಬಸ್ ಗಳಿಗೆ ಅಳವಡಿಸಲಾಗಿದೆ ಮತ್ತು ನಿಯಂತ್ರಣ ಕೊಠಡಿ ಯನ್ನು ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಸ್ಥಾಪನೆ ಮಾಡಲಾಗಿರುತ್ತದೆ.

ಫೋಟೋ ಶೀರ್ಷಿಕೆ: ಈ ಮೇಲ್ಕಂಡ ಪ್ರದರ್ಶನ ಫಲಕದ ಚಿತ್ರವು ಮೈಸೂರು ನಗರ ಬಸ್ ನಿಲ್ದಾಣದ UDS ನಲ್ಲಿ ಸಾರ್ವಜನಿಕ ಮಾಹಿತಿಗಾಗಿ ಅಳವಡಿಸಲಾಗಿದ್ದು , ಬಸ್ ಸಂಖ್ಯೆ ಮತ್ತು ಮಾರ್ಗಗಳ ವಿವರಗಳನ್ನು ಪ್ರಯಾಣಿಕರಿಗೆ ತೋರಿಸಲು ಸ್ಥಾಪಿಸಲಾಗಿರುತ್ತದೆ.

ಇದರಿಂದ ಮೈಸೂರಿನಲ್ಲಿನ ನಗರ ಸಾರಿಗೆ ಬಸ್ಸುಗಳು ವಿಮಾನ ಸೇವೆಗಳಿಗೆ ಸಮಾನದ ಸೇವೆಗಳನ್ನು ಒದಗಿಸಲು ಸಿದ್ಧತೆ ಮಾಡಲಾಗುತ್ತಿದೆ. ಮೈಸೂರುವಿನಲ್ಲಿ ವಿಮಾನಗಳಿಗೆ ಒದಗಿಸಿದ ಸೇವೆಗಳನ್ನು ಹೋಲುವಂತೆ ಈ ಸೇವೆಗಳನ್ನು ನಗರದ ಬಸ್ಸುಗಳಿಗೆ ಭಾರತದಲ್ಲಿ ಮೊದಲ ಬಾರಿಗೆ, ಇಂಟೆಲಿಜೆಂಟ್ ಸಾರಿಗೆ ಸೇವೆಗಳು (ಐ.ಟಿ.ಎಸ್ ) ಎನ್ನುವ ಮೂಲಕ ಅಳವಡಿಸಲಾಗಿದೆ.

ನೀವು ಪ್ರಯಾಣ ಬಯಸುವ ಬಸ್ ಸರಿಯಾದ ಸಮಯಕ್ಕೆ ಬರುವುದಿಲ್ಲವಾದಲ್ಲಿ ಅಥವಾ ಬಸ್ ಸಮಯಕ್ಕೆ ತನ್ನ ನಿಗದಿತ ಸ್ಥಳಕ್ಕೆ ಆಗಮಿಸಿದೆ ಇದ್ದಲ್ಲಿ , ನೀವು ಎಸ್.ಎಂ.ಎಸ್ ಮುಖಾಂತರ ತಕ್ಷಣವೇ ಸೆಂಟ್ರಲ್ ಕಂಟ್ರೋಲ್ ಕೋಣೆಯಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಸೇವೆ ಪಡೆದುಕೊಳ್ಳಬಹುದಾಗಿದೆ.

ಕ.ರಾ.ರ.ಸಾ.ನಿಗಮವು ಇದಕ್ಕಾಗಿಯೇ ಮೈಸೂರು ನಗರದಲ್ಲಿ VTS (ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ)ನ ಅಡಿಯಲ್ಲಿ 500 ಬಸ್, 105 ಬಸ್ ನಿಲ್ದಾಣಗಳಲ್ಲಿ , 45 ಅಂಕಣಗಳಲ್ಲಿ ತರುತ್ತಿದೆ. ಮೈಸೂರು ನಗರ ಸಾರಿಗೆ ಐ.ಟಿ.ಎಸ್ ಕಾರ್ಯನಿರ್ವಹಣೆಯನ್ನು ಅವಲೋಕಿಸಿ, ಕ.ರಾ.ರ.ಸಾ.ನಿಗಮವು ಇತರ ಸ್ಥಳಗಳಿಗೆ ತನ್ನ ಸೇವೆಯನ್ನು ವಿಸ್ತರಿಸಲು ಯೋಜಿಸಿದೆ.


ಬುದ್ಧಿವಂತ ಸಾರಿಗೆ ಎಂದರೇನು?

ಕ.ರಾ.ರ.ಸಾ.ನಿಗಮವು ಉತ್ತಮ, ಅತ್ಯಂತ ನಿಖರ ಮತ್ತು ದೀರ್ಘಕಾಲದ ಸೇವೆಗಳನ್ನು ತನ್ನ ಬಳಕೆದಾರರಿಗೆ ಒದಗಿಸಲು ಈ ಯೋಜನೆಯನ್ನು ರೂಪಿಸಿದೆ. ಬಸ್ ಆಗಮನದ ಸರಿಯಾದ ಸಮಯ, ಇದು ಚಲನೆಯಲ್ಲಿರುವಾಗ ಬಸ್ ಮಾರ್ಗದ ಹುಡುಕುವಿಕೆ, ಬಸ್ ಮಾರ್ಗ ಮತ್ತು ಬಸ್ ಆಗಮನದ ನಡುವಿನ ಸಮಯವನ್ನು - . ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆಯು, ತಂತ್ರಜ್ಞಾನದ ಮೂಲಕ ನಿಯಂತ್ರಿಸುತ್ತದೆ. ಈ ವ್ಯವಸ್ಥೆಯ ಉದ್ದೇಶ, ಕ.ರಾ.ರ.ಸಾ.ನಿ ವೆಚ್ಚಗಳನ್ನು ಕಡಿಮೆ ಮಾಡಲು, ಸುರಕ್ಷತೆ ಮತ್ತು ವಾಹನಗಳ ಅನಿಷ್ಚತತೆಯನ್ನು ಕಡಿಮೆಗೂಳಿಸುತ್ತದೆ.

ಜಜಿಐಎಸ್ ತಂತ್ರಜ್ಞಾನ ಆನ್ ಲೈನ್ ಮೂಲಕ, ಬಸ್ ಚಲನೆಯನ್ನು ಕಂಡುಹಿಡಿಯಬಹುದು. ಈ ಸೇವೆಯನ್ನು “ಮಿತ್ರ” ಎಂದು ಕರೆಯಲಾಗುತ್ತದೆ. ಮೊದಲ ಮೂರು ವರ್ಷಗಳ ಕಾಲ ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಸಿ.ಎಂ.ಸಿ ಕಂಪನಿಗೆ ವಹಿಸಿದ್ದು, ನಂತರ ಅದನ್ನು ನಿಗಮಕ್ಕೆ ವ್ಯಾಪ್ತಿಗೆ ಹಸ್ತಾಂತರಿಸಲಾಗುತ್ತದೆ.


ನಗರ ಸಾರಿಗೆ ಬಸ್ ಗಳಲ್ಲಿ ವಿ.ಎಂ.ಯು (VMU) ಅನ್ನು ಚಾಲಕರ ಮುಂಭಾಗದಲ್ಲಿಯೇ ಅಳವಡಿಸಲಾಗಿದ್ದು, ಈ ವ್ಯವಸ್ಥೆಯಲ್ಲಿ 2 ಸಿಮ್ ಕಾರ್ಡುಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಒಂದು ಸಿಮ್ ನಲ್ಲಿ ನೆಟ್ ವರ್ಕ್ ತೋರಿಸಲು ಮತ್ತು ಎರಡನೇ ಸಿಮ್ ಅನ್ನು ಸಹ ಸಕ್ರಿಯಗೂಳಿಸಿ ಇದೇ ಕಾರ್ಯಕ್ಕೆ ವ್ಯವಸ್ಥಿತಗೂಳಿಸಲಾಗಿರುತ್ತದೆ. ಈ ಸಿಮ್ ಗಳ ನೆಟ್ ವರ್ಕ್ ನ ಮುಖಾಂತರ ಜಿಪಿಎಸ್, ಜಿ.ಪಿ.ಆರ್.ಎಸ್ ಮತ್ತು ಜಿ.ಎಸ್.ಎಂ ಸ್ಯಾಟಲೈಟ್ ತಂತ್ರಜ್ಞಾನದ ಮುಖಾಂತರ ಕಾರ್ಯನಿರ್ವಹಣೆ ಮಾಡುತ್ತದೆ

ಈ ವ್ಯವಸ್ಥೆಯಿಂದ ಬಸ್ ಗಳಲ್ಲಿ ತುರ್ತು ಪರಿಸ್ಥಿತಿ ಆದಂತಹ ಸಮಯದಲ್ಲಿ. ಅಂದರೇ ಬೆಂಕಿ ಅವಡಗಳಲ್ಲಿ , ಎಸ್.ಓ.ಎಸ್ SOS (Save our Soul), (ನಮ್ಮ ಆತ್ಮವನ್ನು ರಕ್ಷಿಸಿ) ಎಂಬ ಗುಂಡಿಯನ್ನು ವಿ.ಎಂ.ಯು ನಲ್ಲಿ ಒತ್ತುವ ಮುಖಾಂತರ ಮತ್ತು ಚಾಲಕರು ತಮ್ಮ ದೈನಂದಿನ ಕಾರ್ಯಚರಣೆಯಲ್ಲಿ ಆಗುವ ಸಾರಿಗೆ ದಟ್ಟಣೆ ಗೆ ಸಂಬಂಧಪಟ್ಟಂತೆ ಸಿಗ್ನಲ್ ಗುಂಡಿಯನ್ನು ವಿ.ಎಂ.ಯು ನಲ್ಲಿ ಒತ್ತುವ ಮುಖಾಂತರ ಕೇಂದ್ರೀಯ ನಿಯಂತ್ರಣಾ ಕೊಠಡಿಗೆ ಸಂದೇಶವನ್ನು ಕಳುಹಿಸಬಹುದು, ಇದರಿಂದ ಇತರೆ ಮಾರ್ಗದಲ್ಲಿನ ಚಾಲಕರು ತಮ್ಮ ಮಾರ್ಗದ ಬದಲಾವಣೆಗಳನ್ನು ಮಾಡಲು ಸಹಕಾರಿಯಾಗುವುದಲ್ಲದೇ ಸಂಚಾರ ದಟ್ಟಣೆ ಕಡಿಮೆಮಾಡುದರಲ್ಲಿ ಯಶಸ್ವಿಯಾಗುತ್ತದೆ.


ಡಬಲ್ ಬ್ರೇಕ್ :

ಇಲ್ಲಿಯವರೆಗೆ ಬಸ್ ಬ್ರೇಕ್ ನ ನಿಯಂತ್ರಣವು ಚಾಲಕರ ಬಳಿ ಇರುತ್ತಿತ್ತು. ಈ ವ್ಯವಸ್ಥೆಯಿಂದ ನಿಯಂತ್ರಣವು ಕೇಂದ್ರಿಯ ನಿಯಂತ್ರಣಾ ಕೊಠಡಿಯ ಜೊತೆ ಸಾಗುತ್ತದೆ. ಅತೀ ವೇಗದ ಚಾಲನ ಸಂದರ್ಭಗಳಲ್ಲಿ , ಚಾಲಕರಿಗೆ ತಮ್ಮ ಮಾರ್ಗದಲ್ಲಿನ ವಾಹನಗಳಲ್ಲಿ ವೇಗವನ್ನು ನಿಯಂತ್ರಣಗೊಳಿಸುವ ಸೂಚನೆಗಳನ್ನು ಅಗಿಂದ್ದಾಗೆ ನಿಯಂತ್ರಣಾ ಕೊಠಡಿಯಿಂದ ಚಾಲಕರಿಗೆ ನೀಡಲಾಗುತ್ತದೆ ಮತ್ತು ಯಾವುದೇ ಚಾಲಕರು ಅವರ ಸೂಚಿತ ಮಾರ್ಗಗಳಲ್ಲಿ ಯಾವುದೇ ಬಸ್ ನಿಲ್ದಾಣಗಳಲ್ಲಿ ನಿಲ್ಲದಿದ್ದಂತಹ ಸಮಯದಲ್ಲಿ , ತಕ್ಷಣವೇ ನಿಯಂತ್ರಣಾ ಕೊಠಡಿಯಿಂದ ಅವರ ಜೊತೆ ಸಂಪರ್ಕ ಹೊಂದಿ ಬಸ್ ನಿಲ್ದಾಣದಲ್ಲಿ ನಿಲ್ಲಿಸದಿರುವ ಬಗ್ಗೆ ಸೂಚಿಸಿ ಮತ್ತು ಚಾಲಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತದೆ.


ಈ ವ್ಯವಸ್ಥೆಯಲ್ಲಿ ಪ್ರಯಾಣಿಕರ ಪಾತ್ರ:

ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಪ್ರಯಾಣಿಕರು ಕನಿಷ್ಟ ಮೊತ್ತದ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಆಗ ಕ್ಷಣಾರ್ಧದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮವು ಬೇಕಾದ ಮಾಹಿತಿಯನ್ನು ಒದಗಿಸಲು ಸಕಲ ಸನ್ನದವಾಗುತ್ತದೆ.


ಎಂ.ಎನ್.ಶ್ರೀನಿವಾಸ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮೈಸೂರು ನಗರ ಸಾರಿಗೆ ವಿಭಾಗ ಕ.ರಾ.ರ.ಸಾ.ನಿಗಮ:

ನಮ್ಮ ಮೈಸೂರು ನಗರ ಸಾರಿಗೆಯಲ್ಲಿ ಅಳವಡಿಸಲಾಗುತ್ತಿರುವ ಈ ವ್ಯವಸ್ಥೆಯು ದೇಶದಲ್ಲಿಯೇ ಮೊದಲ ಅನುಷ್ಠಾನದ ಪ್ರಯತ್ನವಾಗಿರುತ್ತದೆ. ಈ ವ್ಯವಸ್ಥೆಯಲ್ಲಿ ಸಾರ್ವಜನಿಕ ಪ್ರಯಾಣಿಕರು ತಮ್ಮ ಮೊಬೈಲ್ ದೂರವಾಣಿಗಳನ್ನು ಬಳಸುವುದರ ಮುಖಾಂತರ ಸೇವೆಯನ್ನು ಪಡೆಯಬಹುದಾಗಿರುತ್ತದೆ. ಇದರಿಂದ ಪ್ರಯಾಣಿಕರು ತಮ್ಮ ಮೊಬೈಲ್ ದೂರವಾಣಿಗೆ ನೇರವಾಗಿ ಬಸ್ ಆಗಮನ/ನಿರ್ಗಮನದ ಮಾಹಿತಿ ಪಡೆದುಕೊಳ್ಳಬಹುದು.